ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಎ.ಆರ್.ಮಹದೇವಪ್ಪ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯ್ತಿ ಆಡಳಿತ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ.ಆರ್.ಮಹದೇವಪ್ಪ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಅಣ್ಣಯ್ಯ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರಾದ ಆರ್.ಚಂದ್ರಕಲಾ, ಅನಿತಾ, ಸಿರಿಕಿರಣ್, ರತ್ನನಾಗೇಂದ್ರ, ಹೇಮಾವತಿ, ಆಶಾ, ಸಿ.ಎಸ್.ದಿಲೀಪ್‌ಕುಮಾರ್, ಕೆ.ಬಸವರಾಜು, ಕೆ.ಎಂ.ಮ0ಜು, ಶಿವಣ್ಣ, ಕೃಷ್ಣಮೂರ್ತಿ, ಎ.ವಿ.ವಜ್ರಕುಮಾರ್, ಪಿಡಿಒ ಜಿ.ಟಿ.ಸಂತೋಷ್ ಹಾಜರಿದ್ದರು. ಆ ನಂತರ ನೂತನ ಅಧ್ಯಕ್ಷರನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿಗಣೇಶ್, ತಾಲೂಕು ಕಾರ್ಯದರ್ಶಿ ಎಲ್.ಎಸ್.ಮಹೇಶ್, ಸಿ.ವಿ.ಗುಡಿಶಂಭು, ಜಿ.ಎಸ್.ಸತೀಶ್, ಮುತ್ತುರಾಜ್ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.