Friday, April 18, 2025
Google search engine

HomeUncategorizedರಾಷ್ಟ್ರೀಯಸೇನಾ ಟ್ರಕ್ ಉರುಳಿ ಬಿದ್ದು 9 ಯೋಧರು ಹುತಾತ್ಮ: ಪ್ರಧಾನಿ ಮೋದಿ ಸಂತಾಪ

ಸೇನಾ ಟ್ರಕ್ ಉರುಳಿ ಬಿದ್ದು 9 ಯೋಧರು ಹುತಾತ್ಮ: ಪ್ರಧಾನಿ ಮೋದಿ ಸಂತಾಪ

ಲಡಾಕ್: ಸೇನಾ ವಾಹನ ನದಿಗೆ ಉರುಳಿ ಬಿದ್ದು ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿ ಎಂಟು ಜವಾನರು ಹುತಾತ್ಮರಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಲೇಹ್ ಬಳಿ ನಡೆದ ದುರ್ಘಟನೆಯಲ್ಲಿ ನಾವು ನಮ್ಮ ಭಾರತೀಯ ಸೇನೆಯ ಸಿಬ್ಬಂದಿಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಲು ನೋವಾಗುತ್ತಿದೆ. ದೇಶಕ್ಕೆ ಅವರು ನೀಡಿರುವ ಉತ್ಕೃಷ್ಟ ಸೇವೆ ಸದಾ ಸ್ಮರಣೀಯ. ಮೃತ ಕುಟುಂಬಗಳಿಗೆ ಸಂತಾಪಗಳು ಹಾಗೂ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಟ್ವಿಟರ್ ಏಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲೇಹ್‌ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ 4.45ಕ್ಕೆ ಅಪಘಾತ ಸಂಭವಿಸಿದೆ ಎಂದು ಲೇಹ್‌ನಲ್ಲಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಿಡಿ ನಿತ್ಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಟ್ರಕ್‌ನಲ್ಲಿ 10 ಸೈನಿಕರು ಪ್ರಯಾಣಿಸುತ್ತಿದ್ದರು ಮತ್ತು ಬೆಂಗಾವಲು ಪಡೆಯಲ್ಲಿ ಐದು ವಾಹನಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಇನ್ನೂ ಒಬ್ಬ ಜವಾನ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular