ಮೈಸೂರು: ಕರ್ನಾಟಕ ವಿಪ್ರ ವಕೀಲರ ವೇದಿಕೆ ಟ್ರಸ್ಟ್ ವತಿಯಿಂದ ಇಂದು ನೆಲೆ ಅಜಿತನ ಅನಾಥ ಗಂಡು ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರಾದ ಕೆ.ವಿ. ರವಿಚಂದ್ರನ್ ರವರು ಸಮಾಜದಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕಬೇಕು. ಪರಸ್ಪರ ಸಹಕಾರದಿಂದ ಬದುಕಿದರೆ ಮಾತ್ರ ಸಮಾಜ ಸ್ವಾಸ್ತ್ಯ ಸಮಾಜವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಶಿವರಾಮ್ ರವರು ಇಂದು ನಮಗೆ ಬಹಳ ಸಂತೋಷವಾಗುತ್ತಿದೆ . ಅನಾಥಾಲಯಗಳು ಎಂದಿಗೂ ಅನಾಥವಲ್ಲ ಅವೆಲ್ಲವೂ ಸಾರ್ವಜನಿಕ ಆಲಯಗಳು ಸಂಘ ಸಂಸ್ಥೆಗಳು ಇಂತಹ ವಸತಿ ನಿಲಯಗಳಿಗೆ ಬೇಕರ್ನಾಟಕ ವಿಪ್ರ ವಕೀಲರ ವೇದಿಕೆ ಟ್ರಸ್ಟ್ ವತಿಯಿಂದ ಇಂದು ನೆಲೆ ಅಜಿತನ ಅನಾಥ ಗಂಡು ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರಾದ ಕೆ.ವಿ. ರವಿಚಂದ್ರನ್ ರವರು ಸಮಾಜದಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕಬೇಕು. ಪರಸ್ಪರ ಸಹಕಾರದಿಂದ ಬದುಕಿದರೆ ಮಾತ್ರ ಸಮಾಜ ಸ್ವಾಸ್ತ್ಯ ಸಮಾಜವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಶಿವರಾಮ್ ರವರು ಇಂದು ನಮಗೆ ಬಹಳ ಸಂತೋಷವಾಗುತ್ತಿದೆ . ಅನಾಥಾಲಯಗಳು ಎಂದಿಗೂ ಅನಾಥವಲ್ಲ ಅವೆಲ್ಲವೂ ಸಾರ್ವಜನಿಕ ಆಲಯಗಳು ಸಂಘ ಸಂಸ್ಥೆಗಳು ಇಂತಹ ವಸತಿ ನಿಲಯಗಳಿಗೆ ಬೇಟಿ ನೀಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು, ಸಮಾಜ ಎಂದಿಗೂ ನಿಮ್ಮೋಂದಿಗೆ ಇದೆ ಎಂಬುವ ನಂಬಿಕೆ ಅವರಲ್ಲಿ ಬೆಳೆಸಬೇಕು. ನಮ್ಮ ಸಾಮಾಜಿಕ ಕರ್ತವ್ಯವಾಗಿ ಇಂದು ಉಪಹಾರದ ವ್ಯವಸ್ಥೆ ನಾವು ಮಾಡಿದ್ದೇವೆ. ಈ ಸೇವಾ ಚಟುವಟಿಕೆಗಳು ಪ್ರಚಾರಕ್ಕಾಗಿ ಮಾಡದೆ ಪ್ರೇರಣೆಗಾಗಿ ನಾವು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕೆ.ಆರ್. ಶಿವಶಂಕರ್, ಅಧ್ಯಕ್ಷರಾದ ಕೆ.ವಿ. ರವಿಚಂದ್ರನ್, ಉಪಾಧ್ಯಕ್ಷೆ ಜಯಶ್ರೀ ಶಿವರಾಂ, ಕಾರ್ಯದರ್ಶಿ ನಟರಾಜ್, ರಾಜಲಕ್ಷ್ಮಿ, ಎನ್.ಆರ್. ಲಕ್ಷ್ಮೀ, ಪ್ರಕಾಶ್, ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.