ಮೈಸೂರು: ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿ.
ಕೊಪ್ಪ ಗ್ರಾಮದಲ್ಲಿರುವ ಆಯುರ್ವೇದಿಕ್ ಸ್ಪಾ ಮಾಲೀಕ ಪುಷ್ಪ ಕುಮಾರ್ ಅವರ ಬಳಿ ಆರೋಪಿ ದಿವ್ಯರಾಜ್ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪುಷ್ಪ ಕುಮಾರ್ ಅವರು ಬೈಲು ಕುಪ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ದಿವ್ಯರಾಜ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ನಕಲಿ ಕ್ರೈಂ ಪೊಲೀಸ್ ಎಂದು ತಿಳಿದು ಬಂದ ಹಿನ್ನೆಲೆ ದಿವ್ಯರಾಜ್ ಬಂಧಿಸಲಾಗಿದೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.