ಮದ್ದೂರು: ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿ ದೇವಸ್ಥಾನದಲ್ಲಿಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬೆಸಗರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಮಹೇಶ್ ಎಸ್ ಕೆಬ್ಬಹುಂಡಿ ಮೈಸೂರು ಜಿಲ್ಲೆ ಮತ್ತೊಬ್ಬ ಆರೋಪಿ ಗೋವಿಂದ ನಾಯಕ ಮೂಗೂರು ಗ್ರಾಮ ಮೈಸೂರು ಜಿಲ್ಲೆಯವರಾಗಿದ್ದಾರೆ. ಏಳು ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದು ತಖೆಕೆ ನಡೆಸಿ ಆರೋಪಿಗಳಿಂದ ನಾಲ್ಕು ಕೆಜಿ ೧೦೦ ಚಿನ್ನದ ಒಡವೆ, ನಾಲ್ಕು ಕೆಜಿ ೧೦೦ ಗ್ರಾಂ ಬೆಳ್ಳಿ , ೨೧ ಸಾವಿರ ನಗದುನ್ನ ಹಾಗೂ ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮದ್ದೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದೇವಾಲಯದ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.
ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪರವರ ಮಾರ್ಗದರ್ಶನದಲ್ಲಿ ಸಿಪಿಐ ವೆಂಕಟೇಗೌಡ ಪಿಎಸ್‌ಐ ಮಲ್ಲಪ್ಪ ಸಿಬ್ಬಂದಿಗಳಾದ ಕರಿಗಿರಿ ಗೌಡ, ಸಿದ್ದೇಗೌಡ ಶ್ರೀಕಾಂತ್ ಕಿರಣ್ ಕುಮಾರ್ ರವಿ ಕುಮಾರ್ ಲೋಕೇಶ್ ಸೇರಿದಂತೆ ಇತರರು ಕಾರ್ಯಚರಣಿಯಲ್ಲಿ ಭಾಗಿಯಾಗಿದ್ದರು.