ಮೈಸೂರು: ಬಸ್ ಹತ್ತುವ ವೇಳೆ ಪ್ರಯಾಣಿಕರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ನಜರಬಾದ್ ಪೊಲೀಸರು ಆರೋಪಿಯಿಂದ ೨ ಲಕ್ಷ ರೂ. ಮೌಲ್ಯದ ೩೫ ಗ್ರಾಂ ತೂಕದ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ.
ನಗರದ ಹಾರ್ಡಿಂಜ್ ವೃತ್ತದಲ್ಲಿರುವ ನಂಜನಗೂಡು ಕಡೆಗೆ ಹೋಗುವ ಬಸ್ ನಿಲ್ದಾಣದ ಬಳಿ ಪ್ರಯಾಣಿಕರು ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ೨ ರೂ. ಮೌಲ್ಯದ ೩೫ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳವು ಮಾಡಿರುವ ಬಗ್ಗೆ ಮಾ.೭ರಂದು ನಜ಼ರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಮಾಲು ಸಮೇತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮಹಿಳಾ ಆರೋಪಿಯು ನಜ಼ರ್‌ಬಾದ್ ಪೊಲೀಸ್ ಠಾಣೆಯ ಹಳೆಯ ಎಂಒಬಿ ಆರೋಪಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನ ಹಾಗೂ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ನಜ಼ರ್‌ಬಾದ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಮಹದೇವಸ್ವಾಮಿ, ಪಿಎಸ್‌ಐ ಶ್ರೀನಿವಾಸ್ ಪಾಟೀಲ್, ಎಎಸ್‌ಐ ದೀಪಕ್, ಸಿಬ್ಬಂದಿ ಪ್ರಕಾಶ್, ಸತೀಶ್ ಕುಮಾರ್, ಕಿರಣ್ ರಾಥೋಡ್, ಮಲ್ಲಿಕಾರ್ಜುನ ಸಂಜು, ಜಯಲಕ್ಷ್ಮಿ ಹಾಗೂ ಸಿಡಿಆರ್ ಘಟಕದ ಕುಮಾರ್ ಭಾಗವಹಿಸಿದ್ದರು.