ಮೈಸೂರು: ಮನೆ ಬಾಗಿಲು ಮೀಟಿ ಕಳುವು ಮಾಡುತ್ತಿದ್ದ ಕತರ್ ನಾಕ್ ಕಳ್ಳನನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನ ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಕಳ್ಳತನದ ಹಣದಲ್ಲಿ ಖರೀದಿಸಿದ್ದ ಟಾಟಾ ಗೂಡ್ಸ್ ವಾಹನವನ್ನೂ ಸಹ ವಶಪಡಿಸಿಕೊಂಡಿದ್ದಾರೆ. ಯೆರಗನಹಳ್ಳಿ ನಿವಾಸಿ ಕೃಷ್ಣಮೂರ್ತಿ(35) ಬಂಧಿತ ಆರೋಪಿ.
ಈ ಹಿಂದೆ ಆರೋಪಿ ಕೃಷ್ಣಮೂರ್ತಿ ಶ್ರೀರಾಂಪುರ ಬಡಾವಣೆಯ ಎಸ್.ಬಿ.ಎಂ.ಕಾಲೋನಿಯಲ್ಲಿರುವ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಮನೆ ಬಾಗಿಲು ಮೀಟಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.ಈ ಕುರಿತಂತೆ ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯೋನ್ಮುಖರಾದ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.ಕುವೆಂಪುನಗರ ಠಾಣೆಯ ಎರಡು ಕನ್ನಕಳುವು ಪ್ರಕರಣ ಹಾಗೂ ಮೇಟಗಳ್ಳಿ ಠಾಣೆಯ ಎರಡು ಕನ್ನಕಳುವು ಪ್ರಕರಣ ಪತ್ತೆಯಾಗಿದೆ.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ನಿರೀಕ್ಷಕರಾದ ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಗೋಪಾಲ್ ಹಾಗೂ ರಾಧಾ ಮತ್ತು ಸಿಬ್ಬಂದಿಗಳಾದ ಆನಂದ್,ಮಂಜುನಾಥ್,ಹಜರತ್ ಆಲಿ,ಪುಟ್ಟಪ್ಪ,ಸುರೇಶ್ ಹಾಗೂ ನಾಗೇಶ್ ರವರು ಆರೋಪಿಯನ್ನ ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯನ್ನ ಡಿಸಿಪಿ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ರವರು ಪ್ರಶಂಸಿಸಿರುತ್ತಾರೆ.