Thursday, April 3, 2025
Google search engine

Homeಅಪರಾಧಬ್ಯಾಂಕ್ ಬಳಿ ಹೊಂಚುಹಾಕಿ ಹಣ-ಆಭರಣ ದೋಚುತ್ತಿದ್ದ ಅಂತಾರಾಜ್ಯ ಆರೋಪಿಗಳ ಬಂಧನ

ಬ್ಯಾಂಕ್ ಬಳಿ ಹೊಂಚುಹಾಕಿ ಹಣ-ಆಭರಣ ದೋಚುತ್ತಿದ್ದ ಅಂತಾರಾಜ್ಯ ಆರೋಪಿಗಳ ಬಂಧನ

ಬೆಂಗಳೂರು: ಬ್ಯಾಂಕ್ಗಳ ಬಳಿ ಹೊಂಚು ಹಾಕಿ ಬ್ಯಾಂಕ್ನಿಂದ ಹೊರಬರುವ ಗ್ರಾಹಕರನ್ನು ಹಿಂಬಾಲಿಸಿ ಹಣ ಹಾಗೂ ಆಭರಣಗಳನ್ನು ದೋಚುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ, 10 ಲಕ್ಷ ನಗದು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವಸಂದ್ರದ ನಿವಾಸಿಯೊಬ್ಬರು ಬ್ಯಾಂಕ್ನಿಂದ 4 ಲಕ್ಷ ಹಣ ಡ್ರಾ ಮಾಡಿ ಕಾರಿನಲ್ಲಿ ಹೋಗುತ್ತಿದ್ದಾಗ ಟಿ.ಸಿ.ಪಾಳ್ಯದ ಹತ್ತಿರ ಎರಡು ದ್ವಿಚಕ್ರ ವಾಹನಗಳಲ್ಲಿ ಮೂವರು ಖದೀಮರು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನ ವೀಲ್ ಪಂಚರ್ ಆಗಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಪಂಚರ್ ಶಾಪ್ನಲ್ಲಿ ಪಂಚರ್ ಹಾಕಿಸಿ ಹಣ ಕೊಡಲು ಹೋದಾಗ ಕಾರಿನ ಡ್ಯಾಶ್ಬೋರ್ಡ್ನಲ್ಲಿದ್ದ 4 ಲಕ್ಷ ಹಣವನ್ನು ಖದೀಮರು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಕೆಲ ಸಮಯದ ಬಳಿಕ ಹಣ ಕಳವಾಗಿರುವುದು ಗಮನಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬ್ಯಾಂಕ್ ಸುತ್ತಮುತ್ತಲಿನ ರಸ್ತೆಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿ 10 ಲಕ್ಷ ಹಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಐದು ಮಂದಿಯ ಪತ್ತೆ ಕಾರ್ಯ ಮುಂದುವರೆದಿದೆ. ಪ್ರಕರಣವನ್ನು ಇನ್ಸ್ಪೆಕ್ಟರ್ ರಾಮಮೂರ್ತಿ ಹಾಗೂ ಸಿಬ್ಬಂದಿ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES
- Advertisment -
Google search engine

Most Popular