Tuesday, April 22, 2025
Google search engine

Homeರಾಜಕೀಯಕರವೇ ಕಾರ್ಯಕರ್ತರ ಬಂಧನ: ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ – ಜಿ.ಪರಮೇಶ್ವರ್

ಕರವೇ ಕಾರ್ಯಕರ್ತರ ಬಂಧನ: ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ – ಜಿ.ಪರಮೇಶ್ವರ್

ಬೆಂಗಳೂರು: ಬೆಂಗಳೂರಿನಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ನಡೆದ ಕರವೇ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದು, 29 ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಗೃಹಸಚಿವ ಡಾ. ಜಿ.ಪರಮೇಶ್ವರ್  ಪ್ರತಿಕ್ರಿಯೆ ನೀಡಿದ್ದು, ಕಾನೂನಿನ ಉಲ್ಲಂಘನೆ ಮಾಡಿದ್ರೆ ಸುಮ್ಮನಿರಲು ಆಗಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ನಮ್ಮ ಸರ್ಕಾರ ಕನ್ನಡದ ಪರವಾಗಿ, ಯೋಜನೆಗಳನ್ನ, ತೀರ್ಮಾನಗಳ ಬಗ್ಗೆ ನಿಂತಿದೆ. ಕನ್ನಡ ಅನುಷ್ಠಾನದ ಬಗ್ಗೆ ಹಲವು ಬಾರಿ ತೀರ್ಮಾನ ಮಾಡಿದ್ದೇವೆ. ಲೈಸೆನ್ಸ್ ಕೊಡುವ ಸಮಯದಲ್ಲಿ ಕೂಡ ಕನ್ನಡ ಬೋರ್ಡ್ ಬಗ್ಗೆ ಹೇಳಿದ್ದೇನೆ. ಈಗ ಕರವೇ ಬಲವಂತವಾಗಿ ಬೋರ್ಡ್ ತೆಗೆಯೋದು, ಒಡೆಯೋದು ಮಾಡಿದ್ದಾರೆ. ಸಮಸ್ಯೆ ಇದ್ರೆ ನಮ್ಮ ಗಮನಕ್ಕೆ ತರಬೇಕಿತ್ತು. ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕನ್ನಡ ಕಡ್ಡಾಯ ಮಾಡೋದಕ್ಕೆ ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿಯವರು ಫೆಬ್ರವರಿ 28 ಗಡುವು ನೀಡಿದ್ದಾರೆ. ಕಡ್ಡಾಯ ಮಾಡ್ತೀವೆ ಸ್ವಲ್ಪ ಸಮಯ ಕಾಯಬೇಕಲ್ವಾ ಎಂದು ಹೇಳಿದರು.

ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಅಂದ್ರೆ ಹೇಗೆ? ಪ್ರತಿಭಟನೆ ಮಾಡೋಕೆ ಒಂದಷ್ಟು ಸಮಯ ಕೊಡ್ತಾರೆ. ಕಾನೂನಿನ ಉಲ್ಲಂಘನೆ ಮಾಡಿದ್ರೆ ಸುಮ್ಮನಿರೋಕೆ ಆಗಲ್ಲ. ಮಾಲ್​ಗಳಲ್ಲೂ ಕೂಡ ಭದ್ರತೆ ಕೇಳ್ತಾರೆ, ಕೊಡಬೇಕಲ್ವಾ? ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಕಾನೂನನ್ನ ಯಾರೇ ಉಲ್ಲಂಘಿಸಿದ್ದರೂ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸ್ತೀವಿ ಅಂತಾ ನಾರಾಯಣಗೌಡ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಈಗಾಗಲೇ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಬೇರೆಯವರಿಂದ ಪಾಠ ಕಲಿಯೋ ಅವಶ್ಯಕತೆಯಿಲ್ಲ ಎಂದರು.

RELATED ARTICLES
- Advertisment -
Google search engine

Most Popular