ಕೊಳ್ಳೇಗಾಲ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಚೆನ್ನಿಪುರದೊಡ್ಡಿ ಚಾನಲ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಉಡವೊಂದನ್ನು ಸಾಗಿಸುತ್ತಿದ್ದ ಮಂಡ್ಯ ಜಿಲ್ಲೆಯ ಶಿಕಾರಿಪುರ ಗ್ರಾಮದ ರಜಿನಿಕಾಂತ್(೩೧) ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ಟೈಗರ್ ಬ್ಲಾಕ್ ಗ್ರಾಮದ ಸಾರ್ತಾಜ್ (೫೫) ಬಂಧಿಸಿ ಇವರನ್ನು ವಿಚಾರಣೆಗೆ ಒಳಪಡಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಪ್ತಿ ಮಾಡಿದ್ದ ಉಡವನ್ನು ಅರಣ್ಯಾಧಿಕಾರಿಗಳ ಮೂಲಕ ಕಾಡಿಗೆ ಬಿಟ್ಟಿದ್ದು, ಉಡ ಸಾಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಎಸ್‌ಐ ವಿಜಯರಾಜ್ ಮುಖ್ಯಪೇದೆಗಳಾದ ರಾಮಚಂದ್ರ, ಬಸವರಾಜು, ಶಂಕರ, ಸ್ವಾಮಿ, ಲತಾ, ಪೇದೆ ಬಸವರಾಜು, ಚಾಲಕ ಪ್ರಭಾಕರ್ ಇದ್ದರು.