Sunday, April 20, 2025
Google search engine

Homeಅಪರಾಧಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಮೂವರ ಬಂಧನ

ಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಮೂವರ ಬಂಧನ

ಕೋಲಾರ: ಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಅಂತರರಾಜ್ಯ ಆರೋಪಿಗಳನ್ನು ಕೋಲಾರದ ಮುಳಬಾಗಿಲು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಟಿಎಂ ಸೆಂಟರ್‌ಗಳ ಸಮೀಪ ಅಮಾಯಕರ ಬಳಿ ಹಣ ಡ್ರಾ ಮಾಡಿಕೊಡುವುದಾಗಿ ಹಾಗೂ ಪಿನ್ ಪಡೆದು ವಂಚಿಸುತ್ತಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.

ತಮಿಳುನಾಡಿನ ಹೊಸೂರು ಮೂಲದ ಮಂಜುನಾಥ್, ಚಿನ್ನದೊರೈ, ಮಂಜುನಾಥ್ ಬಂಧಿತರು. ಇವರಿಂದ ೧೩ ಸಾವಿರ ನಗದು, ನಾಲ್ಕು ಎಟಿಎಂ ಕಾರ್ಡ್‌ಗಳು, ಒಂದು ಟಿವಿಎಸ್ ಅಪಾಚಿ ಬೈಕ್ ವಶಕ್ಕೆ ಪಡೆಯಲಾಗಿದೆ. ಎಟಿಎಂಗಳ ಬಳಿ ಹಣ ಟ್ರಾ ಮಾಡಿ ಕೊಡುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಈ ತಂಡ, ಹಲವು ವರ್ಷಗಳಿಂದ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದರು. ಬೆಂಗಳೂರು, ಕೋಲಾರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದು, ಮೂರು ರಾಜ್ಯದ ಪೊಲೀಸರಿಗೂ ಬೇಕಾಗಿದ್ದರು.

RELATED ARTICLES
- Advertisment -
Google search engine

Most Popular