Sunday, April 20, 2025
Google search engine

Homeರಾಜ್ಯಕಲೆ , ಸಾಹಿತ್ಯ,  ಸಂಸ್ಕೃತಿ, ನಾಡು, ನುಡಿ, ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಸರ್ವರು ಅಮರರು: ಸುರೇಶ್ ಎನ್...

ಕಲೆ , ಸಾಹಿತ್ಯ,  ಸಂಸ್ಕೃತಿ, ನಾಡು, ನುಡಿ, ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಸರ್ವರು ಅಮರರು: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ; ಕಲೆ ,ಸಾಹಿತ್ಯ,  ಸಂಸ್ಕೃತಿ, ನಾಡು, ನುಡಿ, ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಸರ್ವರು ಅಮರರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಟ ನಿರ್ಮಾಪಕ  ಬೀ ಆರ್  ಪಂತಲು ಹಾಗೂ ಪಿ ಬಿ ಶ್ರೀನಿವಾಸ್ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನ್ನಡ ಚಿತ್ರರಂಗಕ್ಕೆ  ಪದ್ಮಿನಿ ಪಿಚ್ಚರ್ ಸ್ಥಾಪನೆ ಮಾಡುವ ಮೂಲಕ ಸ್ಕೂಲ್ ಮಾಸ್ಟರ್ ಚಲನಚಿತ್ರ ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಕೀರ್ತಿ  ಸಲ್ಲುತ್ತದೆ. ಅವರ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಗಾಳಿ ಗೋಪುರ ,ಕೃಷ್ಣದೇವರಾಯ, ಒಂದು ಹೆಣ್ಣಿನ ಕಥೆ ಚಿತ್ರಗಳು ಹಲವು ದಶಕಗಲಾದರು ಚಿತ್ರರಂಗ ಇಂದಿಗೂ ಗೌರವಿಸುತ್ತದೆ. ರಾಜಕುಮಾರ್, ನರಸಿಂಹರಾಜು, ಉದಯಶಂಕರ್ ,ಕಣಗಾಲ್ ಮುಂತಾದವರ ಪರಿಚಯಿಸಿದ ಕೀರ್ತಿ  ಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿತ್ರೋದ್ಯಮಿ ಜಯಸಿಂಹ ಮಾತನಾಡಿ ಚಿತ್ರರಂಗದ ಸುವರ್ಣ ಯುಗದ ಹರಿಕಾರರು ಪಂತಲು. ಕನ್ನಡ ಚಿತ್ರರಂಗ ಮೋಹನ್ ದ್ರುವ ತಾರೆಗಳನ್ನು ನೀಡಿದ ಕ್ಷೇತ್ರ ಡಾಕ್ಟರ್ ರಾಜಕುಮಾರ್ ರವರ ಧ್ವನಿಯಾಗಿ ಹಾಡಿದ ಪಿಪಿ ಶ್ರೀನಿವಾಸ್ರವರ ಹಾಡುಗಳನ್ನು ಕೇಳುವುದೆ ಸ್ವರ್ಗ. ನೂರಾರು ಗೀತೆಗಳ ಗಾಯನ ಮಾಡಿರುವ ಪಿ ಬೀ ಶ್ರೀನಿವಾಸ್ ಮರೆಯಲಾಗದ ರತ್ನ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ  ನಿರ್ದೇಶಕ ವೆಂಕಟೇಶ ಬಾಬು, ಪಿಬಿ ಶ್ರೀನಿವಾಸ್ ರವರ ಜೀವನ ಮತ್ತು ಸರಳತೆ, ಸೌಜನ್ಯ ,ಮಾಧುರ್ಯದ ಧ್ವನಿ ಅಮೋಘವಾದದ್ದು. ಅವರೊಂದಿಗೆ ಮಾತನಾಡುವ ಸೌಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯವೆಂದು ತಿಳಿಸಿದರು.

ಗಾಯಕ ಸುರೇಶ್ ನಾಗ್ ರವರು ಪಿಪಿ ಶ್ರೀನಿವಾಸ್ ರವರ ಗೀತೆಗಳನ್ನು ಹಾಡಿದರು.

ಬರಹಗಾರ ಲಕ್ಷ್ಮಿ ನರಸಿಂಹ , ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮಹದೇವಪ್ಪ , ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರಪ್ರಸಾದ್, ಸರಸ್ವತಿ, ಸುರೇಶ್ ಗೌಡ  , ಗುರುರಾಜ್, ಬೊಮ್ಮಾಯಿ , ಬಿಕೆ ಆರಾಧ್ಯ, ಗುರುಮಲ್ಲಪ್ಪ ,ಗೋವಿಂದರಾಜು ಇದ್ದರು.

RELATED ARTICLES
- Advertisment -
Google search engine

Most Popular