ಹುಣಸೂರು ರೋಟರಿ ಕ್ಲಬ್ ಮತ್ತು ಚೈತನ್ಯ ಬಳಗದವತಿಯಿಂದ 25 ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ
ಹುಣಸೂರು: ದೇಶ ಸೇವೆಯಲ್ಲಿ ಎಷ್ಟೇ ಕ್ಲಿಷ್ಟಕರ ಸಮಸ್ಯೆ ಬಂದರೂ ಅದನ್ನು ನಾವು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೊ ಎಂದು ಕಾರ್ಗಿಲ್ ಯುದ್ದದಲ್ಲಿ ಜಯಗಳಿಸಿದ ನೆನಪನ್ನು ಮಾಜಿ ಸೈನಿಕ -ಕುಡಿನೀರು ಮುದ್ದನಹಳ್ಳಿ ಮಂಜುನಾಥ್ -ಹಂಚಿಕೊಂಡರು.
ಹುಣಸೂರು ರೋಟರಿ ಕ್ಲಬ್ ಮತ್ತು ಚೈತನ್ಯ ಬಳಗದವತಿಯಿಂದ 25 ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜುಲೈ 25, ರ ಗೆಲುವು ಭಾರತದ ಐತಿಹಾಸಿಕ ಗೆಲುವಾಗಿತ್ತು. ಅಂದಿನ ನೂರಾರು ಹುತಾತ್ಮರ ಹೋರಾಟದ ಫಲ. ಇಂದು ಭಾರತೀಯರು ನೆಮ್ಮದಿ ಬದುಕು ಸಾಧಿಸಲು ಸಾಧ್ಯವಾಗಿದೆ ಎಂದರು.
ಮತ್ತೊಬ್ಬ ವೀರಯೋಧ ಹಾಗೂ ಮಾಜಿ ಸೈನಿಕ ಲೂಯಿಸ್ ಪೆರೇರಾ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ನೂರಾರು ದಿನಗಳ ಫಲಶೃತಿಯಾಗಿತ್ತು. ಪರ್ವತಗಳ ನಡುವೆ ಜೀವಿಸುತ್ತಿದ್ದ ನಮಗೆ ಕಮಾಂಡರ್ ಲೀಡರ್ ಸೂಚಿಸುತ್ತಿದ್ದ ಎಲ್ಲಾ ಸೂಕ್ಷ್ಮತೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೋ.. ಹಸಿವು ಆಯಾಸ ನಮ್ಮ ಬಳಿ ಸುಳಿಯುತ್ತಿರಲಿಲ್ಲ. ನಮಗೆ ಗೆಲುವಿನ ಹಸಿವು ಮಾತ್ರ ಕಂದಕಗಳ ನಡುವೆಯೂ ಗೋಚರಿಸುತ್ತಿತ್ತು ಎಂದು ತಮ್ಮ ರೋಚಕ ಅನುಭವ ತಿಳಿಸಿದರು.
ನಗರದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಮಾತನಾಡಿ, ಶಿಸ್ತು ಎಂದರೆ ಏನು ಎಂದು ಕಲಿಸಿದ್ದು ದೇಶಸೇವೆಯ ಸೈನಿಕರು. ವಿಜಯೋತ್ಸವದಲ್ಲಿ ಜಯಕ್ಕೆ ಕಾರಣರಾದ ಸೈನಿಕರು ಮತ್ತು 572 ವೀರಯೋಧರು ನಮ್ಮ ದೇಶಕ್ಕೆ ಬಲಿದಾನ ನೀಡಿ, ಹುತಾತ್ಮರಾದವರನ್ನು ಮಾತ್ರ ನಾವೆಂದೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ, ಸಹಾಯಕ ಗೌರ್ನರ್ ಆನಂದ್. ಆರ್. ವಲಯ 6 ರ ಸೇನಾನಿ ಪಾಂಡುಕುಮಾರ್ .ಪಿ. ರೊ.ಅಧ್ಯಕ್ಷ ಪ್ರಸನ್ನ. ಕೆ.ಪಿ. ಹಿರಿಯ ರೋಟರಿ ಸದಸ್ಯ ರಾಜಶೇಖರ್, ಡಾ.ಬಸವರಾಜ, ಜಿ.ವಿ.ಶ್ರೀನಾಥ್, ಶ್ಯಾಮ್, ಸಂತೋಷ್ ಕುಮಾರ್, ಚೈತನ್ಯ ಬಳಗದ ರೇಣುಕಾ ಪ್ರಸಾದ್, ಹನಗೋಡ್ ನಟರಾಜ್, ಲಕ್ಷ್ಮಿಕಾಂತ್, ರೊ.ಕಾರ್ಯದರ್ಶಿ ಹೆಚ್.ಆರ್. ಕೃಷ್ಣಕುಮಾರ್ ಇದ್ದರು.