Monday, August 11, 2025
Google search engine

Homeರಾಜ್ಯಸುದ್ದಿಜಾಲಕ್ಷೇತ್ರದ ಜನರ ಮಗನಾಗಿ, ಅವರ ಸೇವೆಯೇ ನನ್ನ ಧ್ಯೇಯ: ಮಾಜಿ ಸಚಿವ ಸಾ.ರಾ. ಮಹೇಶ್

ಕ್ಷೇತ್ರದ ಜನರ ಮಗನಾಗಿ, ಅವರ ಸೇವೆಯೇ ನನ್ನ ಧ್ಯೇಯ: ಮಾಜಿ ಸಚಿವ ಸಾ.ರಾ. ಮಹೇಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ನಾನು ಕ್ಷೇತ್ರದ ಜನರ ಮಗನಾಗಿದ್ದು ಅವರ ಸೇವೆಯೆ ನನ್ನ ಮೊದಲ ಆದ್ಯತೆಯಾಗಿ ಕಳೆದ ೨೦ವರ್ಷಗಳಿಂದ ದುಡಿದಿದ್ದು ಅವರ ಆಯ್ಕೆಯನ್ನು,ತಿರಸ್ಕಾರವನ್ನು ಅವರಿಗೆ ಬಿಟ್ಟಿದ್ದೇನೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿದರು.

ಸಾಲಿಗ್ರಾಮ ತಾಲ್ಲೋಕಿನ ಚುಂಚನಕಟ್ಟೆಯಲ್ಲಿ ಸಾಲಿಗ್ರಾಮ ತಾಲ್ಲೋಕು ಜೆಡಿಎಸ್ ಘಟಕದ ವತಿಯಿಂದ ನಡೆದ ಸಾ.ರಾ ಮಹೇಶ್ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅಧಿಕಾರ ಇದ್ದಾಗ ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದು ಅವರ ಪ್ರೀತಿ,ನಂಬಿಕೆ ವಿಶ್ವಾಸ ನನಗೆ ಕ್ಷೇತ್ರದಲ್ಲಿ ಹೆಚ್ಚಿಗೆ ದೊರೆತಿದ್ದು ಅದಕ್ಕೆ ನಾನು ಋಣಿಯಾಗಿರುವೆ ಎಂದು ಹೇಳಿದರು.

ಕಾರ್ಯಕರ್ತರು,ಅಭಿಮಾನಿಗಳೇ ಹುಟ್ಟುಹಬ್ಬ ಆಯೋಜನೆ ಮಾಡಿದ್ದು ನನ್ನ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ ಆದರೆ ಕೆಲ ವ್ಯತ್ಯಾಸಗಳು ಸಹಜ ಅಧಿಕಾರ ಪಡೆದವರು ತಾರತಮ್ಯ ಮಾಡದೆ ಕೆಲಸ ಮಾಡಲಿ ಎಂಬುದೇ ನಮ್ಮ ಆಶಯವಾಗಿದ್ದು ಮುಂದಿನ ದಿನಗಳ ಬಗ್ಗೆ ಈಗಲೇ ಏನು ಹೇಳುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಮಾತನಾಡಿ ಅಭಿವೃದ್ದಿಗೆ ಹೊಸ ಭಾಷ್ಯ ನೀಡಿದ ಸಾ.ರಾ ಮಹೇಶ್ ಅವರ ರಾಜಕೀಯ ಜೀವನ ಎಷ್ಟು ಸ್ವಚ್ಚವೋ ಅಷ್ಟೇ ಅವರ ಮನಸ್ಸು ಮೃದುವಾಗಿದ್ದು ಕ್ಷೇತ್ರದ ಸಮಸ್ಯೆಗಳನ್ನು ನಿರಂತರವಾಗಿ ತಿಳಿದಿದ್ದು ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿದು ಭಗವಂತ ಅವರಿಗೆ ಇನ್ನು ಹೆಚ್ಚಿನ ಸ್ಥಾನಮಾನಗಳನ್ನು ನೀಡಲಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಚುಂಚನಕಟ್ಟೆ ಬಸವವೃತ್ತದಲ್ಲಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸನ್ಮಾನಿಸಿ ಕಾರ್ಯಕರ್ತರು ಅಭಿಮಾನಿಗಳು ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಮೈಮುಲ್ ನಿರ್ದೇಶಕ ಎ.ಟಿ ಜೆಡಿಎಸ್ ವಕ್ತಾರ ಕೆ.ಎಲ್ .ರಮೇಶ್ ಸೋಮಶೇಖರ್, ಗ್ರಾಪಂ ಅಧ್ಯಕ್ಷೆ ರೇಖಾ, ಹೊಸೂರು ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ನಿರ್ದೇಶಕ ಕೃಷ್ಣಮೂರ್ತಿ, ನವೀನ್, ರಮೇಶ್, ಶ್ರೀಧರ್, ವಿವೇಕ್, ಒಕ್ಕಲಿಗರ ಸಂಘದ ನಿರ್ದೇಶಕ ಅಂಕನಹಳ್ಳಿತಿಮ್ಮಪ್ಪ, ಮುಖoಡರಾದ ಬಿ.ರಮೇಶ್, ವಿಜೇಂದ್ರ, ಹಾಡ್ಯಮಹೇಶ್, ಧರ್ಮಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್‌ಮಧು, ನಾಡಪ್ಪನಹಳ್ಳಿಮಹದೇವ್, ಜಮೀಲ್, ಪ್ರವೀಣ,ಗ್ರಾಪಂ ಸದಸ್ಯ ಸಿ.ಬಿ.ಧರ್ಮ ಗೋವಿಂದೇಗೌಡ, ಕೃಷ್ಣ, ರಾಕೇಶ್, ತಿಲಕ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular