Friday, April 4, 2025
Google search engine

Homeರಾಜ್ಯಅಶೋಕ್‌ಗೆ ರಾಜೀನಾಮೆ ಕೊಡ್ಬೇಕು ಅನ್ಸಿದ್ರೆ ಕೊಡ್ಲಿ, ನಾನ್ಯಾಕೆ ರಾಜೀನಾಮೆ ಕೊಡ್ಬೇಕು : ಸಿಎಂ ಸಿದ್ದರಾಮಯ್ಯ ಸವಾಲು

ಅಶೋಕ್‌ಗೆ ರಾಜೀನಾಮೆ ಕೊಡ್ಬೇಕು ಅನ್ಸಿದ್ರೆ ಕೊಡ್ಲಿ, ನಾನ್ಯಾಕೆ ರಾಜೀನಾಮೆ ಕೊಡ್ಬೇಕು : ಸಿಎಂ ಸಿದ್ದರಾಮಯ್ಯ ಸವಾಲು

ರಾಯಚೂರು : ಮುಡಾ ಹಗರಣದಲ್ಲಿ ವಿಪಕ್ಷ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತಿವೆ ಅಲ್ಲದೆ ಇತ್ತೀಚಿಗೆ ಕಾಂಗ್ರೆಸ್ ನಾಯಕರು ಆರ್ ಅಶೋಕ್ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಇದಕ್ಕೆ ಅಶೋಕ್ ನಾನು ರಾಜೀನಾಮೆ ಕೊಡುತ್ತೇನೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುತ್ತಾರಾ ಎಂದು ಸವಾಲು ಹಾಕಿದ್ದರು.

ಇಂದು ಶನಿವಾರ ಮಾನ್ವಿಯಲ್ಲಿ ನಡೆದ ಸ್ವಾಭಿಮಾನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ರಾಜೀನಾಮೆ ಕೇಳುವ ಆರ್ ಅಶೋಕ್ ಮೊದಲು ರಾಜೀನಾಮೆ ಕೊಡಬೇಕು. ಅವರು ಮೊದಲು ಕೊಡಲಿ. ಅವರಿಗೆ ರಾಜೀನಾಮೆ ಕೊಡಬೇಕು ಅನ್ನಿಸಿದ್ರೆ ಕೊಟ್ಟುಬಿಡಲಿ. ಆದರೆ ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನು ಹೋರಾಟ ಮಾಡುತ್ತೇನೆ ಸತ್ಯಕ್ಕೆ ಜಯವಿದೆ ಎಂದು ಹೇಳಿದರು.

ಜಿ.ಟಿ. ದೇವೆಗೌಡ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು. ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದ್ದು ಸರಿಯಾಗಿದೆ. ಆದರೆ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಪಾದಯಾತ್ರೆಯಲ್ಲಿ ಭಾಗವಹಿಸಿರಬಹುದು ಆದರೆ ನೇತೃತ್ವವಹಿಸಿಲ್ಲ. ಅವರೇ ಪಾದಯಾತ್ರೆ ಬೇಡ ಎಂದಿದ್ದರು. ಆದರೆ ಜೆಡಿಎಸ್-ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕೆ ಪಾದಯಾತ್ರೆ ಮಾಡಿದರು ಎಂದು ತಿಳಿಸಿದರು.

ಕರ್ನಾಟಕ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರ್ನಾಟಕ ನಾಮಕರಣ ಆಗಿ ೫೦ ವರ್ಷ ತುಂಬಿದ ಹಿನ್ನೆಲೆ ಗೋಕಾಕ್ ಚಳುವಳಿ ಹಿನ್ನೊಟ-ಮುನ್ನೋಟ ಚರ್ಚೆ ನಡೆಯುತ್ತಿದೆ.ಹಿಂದುಳಿದ, ದಲಿತರಲ್ಲಿ ಸ್ವಾಭಿಮಾನ ಹೆಚ್ಚಾಗಬೇಕು ಅಂತ ಈ ಸಮಾವೇಶ ಮಾಡುತ್ತಿದ್ದೇವೆ. ಯಾರ ಸ್ವಾಭಿಮಾನಕ್ಕೂ ಧಕ್ಕೆಯಾಗಬಾರದು ಎಂದರು.

RELATED ARTICLES
- Advertisment -
Google search engine

Most Popular