Friday, April 4, 2025
Google search engine

Homeರಾಜ್ಯಸುದ್ದಿಜಾಲದಿವಂಗತ ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ದಿವಂಗತ ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ಹಾವೇರಿ: ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ದಿವಂಗತ ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಇಂದು ಉದ್ಘಾಟಿಸಿದರು.

ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಭಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೊಡ್ಮನೆ ಸೊಸೆ, ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು 6 ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.

ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿ, ಪ್ರಕಾಶ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.

ಅಭಿಮಾನಿ ಮನೆಯಲ್ಲಿ ಮಾತನಾಡಿದ ಅವರು, ಅದಕ್ಕೆ ಅಭಿಮಾನಿಗಳೇ ದೇವರು ಅನ್ನೋದು, ಇಂತಹ ಅಭಿಮಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ ಎಂದರು.

ಎಂಟು ತಿಂಗಳ ಹಿಂದೆ ಪ್ರಕಾಶ ಪಾದರಕ್ಷೆ ಧರಿಸದೇ ಕೆಲಸ ಮಾಡಿದ್ದ, ಇವತ್ತು ಪಾದರಕ್ಷೆಯನ್ನು ಹಾಕಿದ್ದಾನೆ. ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ದೇವಸ್ಥಾನ ಉದ್ಘಾಟನೆ ಮಾಡಿದ್ದೇನೆ. ನಮ್ಮ ಪಾಲಿನ ದೇವರು ನೀವು ಎಂದು ಅಭಿಮಾನಿ ಪ್ರಕಾಶ ಮತ್ತು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular