ಮೈಸೂರು: ಶ್ರೀ ವಿದ್ಯಾಗಣಪತಿ ಮತ್ತು ಮಾರುತಿ ಶ್ರೀ ಯುವಕರ ಸಂಘ (ನೋಂ) 4ನೇ ಮುಖ ರಸ್ತೆ, ಪಡುವಾರಳ್ಳಿ,ಯ ಸಂಘದವರಿಂದ ದಿನಾಂಕ 15-12-2024 ರಂದು 57ನೇ ವರ್ಷದ ಶ್ರೀ ಹನುಮ ಜಯಂತಿಯ ಪೂಜಾ ಮಹೋತ್ಸವ ಅಂಗವಾಗಿ ನಡೆಯುವ ಗೀತ ಗಾಯನ ಸ್ಪರ್ಧೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ರವರು ಹನುಮ ಜಯಂತಿ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೀತ ಗಾಯನ ಸ್ಪರ್ಧೆ ಮಾಡುವ ಮುಖಾಂತರ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಜಯಂತಿಯನ್ನು ಮೈಸೂರಿನಲ್ಲಿ ಆಚರಣೆ ಮಾಡುತ್ತಿರುವುದು ಸಾಂಸ್ಕೃತಿಕ ನಗರಿ ಮೈಸೂರಿಗೆ ಕೀರ್ತಿ ಹೆಚ್ಚಿಸಲಿದೆ.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ರವರು ಹಾಗೂ ಸಮಾಜಸೇವಕ ರಾದ ಪಡುವಾರಳ್ಳಿ ಮಂಜುನಾಥ್ ರವರು, ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಡಿ ಲೊಹಿತ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತರಿಗೆ
ಪ್ರಥಮ ಬಹುಮಾನ ರೂ. 4000/-
ದ್ವೀತಿಯ ಬಹುಮಾನ 3000/- ತೃತಿಯ ಬಹುಮಾನ ರೂ.2000/- ,
ನಾಲ್ಕನೇ ಬಹುಮಾನ ರೂ. 1000/-
ಐದನೇ ಬಹುಮಾನ = ರೂ. 500/-
ಗೀತಗಾಯನ ಸ್ಪರ್ಧೆಯು ದಿನಾಂಕ 15-12-2024 ನೇ ಭಾನುವಾರ ಬೆಳಿಗ್ಗೆ 10.00ರಿಂದ ಸಂಜೆ 7.00ರವರೆಗೆ ನಡೆಯಲಿದೆ.
ವಿಶೇಷ ಸೂಚನೆಗೆ : ಭಾಗವಹಿಸುವ ಸ್ಪರ್ಧಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ನೇರವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸೋಲೋ ಹಾಡಿಗೆ ರೂ.200 ಹಾಗೂ ಡುಯೆಟ್ ಹಾಡಿಗೆ ರೂ.300/- ಗಳನ್ನು ಪಾವತಿಸಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ಮತ್ತು ನೆನಪಿನ ಕಾಣಿಕೆ ಕೊಡಲಾಗುವುದು. ವಿಜೇತರಿಗೆ ನಗದು ಬಹುಮಾನ ಕೊಡಲಾಗುವುದು. ಗಾಯಕರು ತಮ್ಮ ಹಾಡಿನ ಕರೋಕೆಯನ್ನು ಮೊದಲೇ ಸಿದ್ದಪಡಿಸಿ ವೇದಿಕೆಗೆ ತರಬೇಕು. ಭಾಗವಹಿಸುವ ಸ್ಪರ್ಧಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ತೀರ್ಪುಗಾರರ ತೀರ್ಮಾನವೆ ಅಂತಿಮ. – ಡುಯೇಟ್ 300/- ರೂ ಸೋಲೋ ಹಾಡಿಗೆ ರೂ. 200/- ಹೆಚ್ಚಿನ ಮಾಹಿತಿಗೆ 8105078070 ಸಂಪರ್ಕಿಸಿ.