Friday, April 11, 2025
Google search engine

Homeರಾಜ್ಯಸುದ್ದಿಜಾಲಪ್ರತಾಪ್ ಸಿಂಹ ರಾಜೀನಾಮೆ ಕೇಳೋದು ಯಾರಿಗೂ ಶೋಭೆ ತರಲ್ಲ: ಶಾಸಕ ಜಿ.ಟಿ.ದೇವೇಗೌಡ

ಪ್ರತಾಪ್ ಸಿಂಹ ರಾಜೀನಾಮೆ ಕೇಳೋದು ಯಾರಿಗೂ ಶೋಭೆ ತರಲ್ಲ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಸಂಸತ್ ಅಧಿವೇಶನದಲ್ಲಿ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.ಸಂಸತ್ ಅಧಿವೇಶನದಲ್ಲಿ ಭದ್ರತಾ ಲೋಪ ಆಗಿರುವುದು ನಿಜ.
ಭದ್ರತಾ ಲೋಪ ಎಸಗಿರುವ ಅಧಿಕಾರಿಗಳಿಗೆ ಶಿಕ್ಷೆ ಆಗಲಿ.ಸಂಸತ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ ವಿಚಾರಕ್ಕೆ ಪ್ರತಾಪ್ ಸಿಂಹ ರಾಜೀನಾಮೆ ಕೇಳೋದು ಯಾರಿಗೂ ಶೋಭೆ ತರಲ್ಲ ಎಂದಿದ್ದಾರೆ.

ಸಂಸದ ಪ್ರತಾಪ್ ಸಿಂಹ ಪರ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್ ಮಾಡಿದ್ದು, ಶಾಸಕರು, ಸಂಸದರು ತಮ್ಮ ಕ್ಷೇತ್ರದ ಮತದಾರರಿಗೆ ಅಧಿವೇಶನ ನೋಡಲಿಕ್ಕೆ ಪಾಸ್ ಕೇಳುತ್ತಾರೆ.ಕ್ಷೇತ್ರದ ಮತದಾರರು ಪಾಸ್ ಕೇಳಿದಾಗ ನಾವು ಕೊಡಲೇಬೇಕು.ಪಾಸ್ ಕೇಳಿರುವ ವ್ಯಕ್ತಿ ನಮ್ಮ ಕ್ಷೇತ್ರದ ಮತದಾರರೇ ಎಂದು ಪರಿಶೀಲನೆ ಮಾಡುತ್ತೇವೆ. ಬಳಿಕ ಪಾಸ್ ನೀಡುತ್ತೇವೆ.ಸಂಸತ್ ನ ಭದ್ರತಾ ಸಿಬ್ಬಂದಿಗಳು ಪಾಸ್ ಪರಿಶೀಲನೆ ಮಾಡಬೇಕಿತ್ತು ಎಂದಿದ್ದಾರೆ.

ಭದ್ರತಾ ಸಿಬ್ಬಂದಿಗಳ ವೈಫಲ್ಯದಿಂದ ಘಟನೆ ನಡೆದಿದೆ.ಇದಕ್ಕೆ ಪ್ರತಾಪ್ ಸಿಂಹ ರಾಜೀನಾಮೆ ಕೇಳೋದು ಸರಿಯಲ್ಲ ಎಂದು ಜಿಟಿ ದೇವೇಗೌಡ ಹೇಳಿದ್ದಾರೆ.

 

RELATED ARTICLES
- Advertisment -
Google search engine

Most Popular