ಮುಂಬೈ:ಸಿವಿಕ್ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ (ಯುಬಿಟಿ) ನಾಲ್ವರು ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಕದಂ, ಸದಾ ಪರಬ್, ಉದಯ್ ದಾಲ್ವಿ ಮತ್ತು ಹಾಜಿ ಅಲೀಂ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ವಕೋಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಎಫ್‍ಐಆರ್‍ನಲ್ಲಿ ಮಾಜಿ ಸಚಿವ ಅನಿಲ್ ಪರಬ್ ಅವರನ್ನೂ ಕೂಡ ಆರೋಪಿ ಎಂದು ಹೆಸರಿಸಲಾಗಿದೆ, ಆದರೆ ಅವರನ್ನು ಬಂಧಿಸಲಾಗಿಲ್ಲ. ಪರಬ್ ಮತ್ತು ಇತರ ಸೇನಾ (ಯುಬಿಟಿ) ಕಾರ್ಯಕರ್ತರು ಕಳೆದ ಸೋಮವಾರ ಮಧ್ಯಾಹ್ನ ಬೃಹನ್‍ಮುಂಬೈ ಮುನ್ಸಿಪಲ್ ಕಾಪೆರ್ರೇಷನ್ (ಬಿಎಂಸಿ) ಯಎಚ್-ಈಸ್ಟ್ ವಾರ್ಡ್ ಕಚೇರಿಗೆ ಬಳಿ ಮೆರವಣಿಗೆ ನಡೆಸಿದರು.
ಪ್ರತಿಭಟನೆಯ ವೇಳೆ ಆರೋಪಿಗಳು ಬಿಎಂಸಿ ಇಂಜಿನಿಯರ್ ಅಜಯ್ ಪಾಟೀಲ್ (42) ಅವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ದೂರಿನ ಹಿನ್ನಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.