ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬೆಂಗಳೂರಿನಲ್ಲಿ ವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೃಷ್ಣರಾಜನಗರ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂಭಾಗ ಧರಣಿ ಕೈಗೊಂಡು ಗ್ರೇಡ್-೨ ತಹಸೀಲ್ದಾರ್ ಬಾಲಸುಬ್ರಮಣ್ಯ ಹಾಗೂ ಶಿರಸ್ತೆದಾರ್ ಅಕ್ರಂ ಭಾಷ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅಧ್ಯಕ್ಷರು ಮೇ.೧೮ ರಂದು ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಕ್ಕೆ ಹೋಗಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿದ್ದ ಕೆಲ ಪುಂಡರು ಮನಬಂದoತೆ ಹಲ್ಲೆ ನಡೆಸಿದವರ ವಿರುದ್ಧ ಸಂಘದ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸದಸ್ಯರು ತಾಲೂಕು ಆಡಳಿತ ಸೌತದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರಿಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು ಹೊಟ್ಟೆಪಾಡಿಗಾಗಿ ವಿಡಿಯೋ ಚಿತ್ರೀಕರಣ ಮಾಡುವ ಛಾಯಾಗ್ರಹನ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಘಟನೆ ಯಾಗಿದ್ದು, ಇದರಿಂದ ಛಾಯಾಗ್ರಹಕರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ತಮ್ಮ ಆಕ್ರೋಶವನ್ನು ಹೋರಹಾಕಿದರು.
ಈ ಕೃತ್ಯವನ್ನು ಖಂಡಿಸಿ ರಾಜ್ಯ ಛಾಯಾಗ್ರಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಲ್ಲೆ ನಡೆಸಿದ ಪುಂಡರ ಮೇಲೆ ಪೊಲೀಸರಿಗೆ ದೂರು ನೀಡಿದ್ದು ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಲ್ಲೆ ಮಾಡಿದ ಪುಂಡರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಛಾಯಾಗ್ರಹಕರಿಗೆ ಸೂಕ್ತ ರಕ್ಷಣೆ ದೊರಕಿಸಿಕೊಡಬೇಕು ಹಾಗೂ ಹಲ್ಲೆಗೊಳಾಗಿರುವ ಛಾಯಾಗ್ರಹಕನಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯರುಗಳಾದ ಎಂ.ಪಿ.ಮಹದೇವ, ಸಂತೋಷ್, ಕಾರ್ಯದರ್ಶಿ ಶ್ರೀನಿವಾಸ್‌ಗೌಡ, ಪದಾಧಿಕಾರಿಗಳಾದ ಯೋಗೇಶ್, ಜಯರಾಜ್, ಚೀರನಹಳ್ಳಿ ರವಿ, ನಿರ್ದೇಶಕರುಗಳಾದ ಉಮಾಶಂಕರ್, ಶುಭಂರವಿ, ಮಂಜುನಾಥ್, ರಘುಚಂದಗಾಲು, ವಿಜಯ್, ಸದಸ್ಯರಾದ ಶಿಲ್ಪಶ್ರೀನಿವಾಸ್, ತಿಪ್ಪೂರುರವಿ, ಶ್ರೀನಿವಾಸ್, ಸಾರಾ.ನಾಗೇಶ್, ಮಧುವನಹಳ್ಳಿ ರಘು, ದಯನಂದ್, ರಕ್ಷಿತ್, ಸುನೀಲ್, ಶರತ್, ಸುನೀಲ್ ಮೊದಲಿಯರ್ ಸೇರಿದಂತೆ ಇನ್ನಿತರರು ಭಾಗವಹಿಸಿದರು.