ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯಲ್ಲಿ ಭತ್ತದ ಬೆಳೆಯಲ್ಲಿ ಪ್ರಾರಂಭಿಕ ಹಂತದಲ್ಲಿದ್ದು ಬೆಳೆಗೆ ಕೆಲವು ಕೀಟಭಾದೆ ಹಾಗೂ ಪೋಷಕಾಂಶಗಳ ಕೊರತೆ ಎದುರಾಗಿದ್ದು ರೈತರು ಈ ನಿರ್ವಹಣೆ ಕ್ರಮಗಳನ್ನು ಕೈಕೊಳ್ಳುವಂತೆ ಕೆ.ಆರ್.ನಗರ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಭತ್ತದ ಬೆಳೆಗೆ ಜಿಂಕ್ ಕೊರತೆ (ಲಘು ಪೋಷಕಾಂಶ)ಯಿಂದ ಹೊಸ ಎಲೆಗಳ ಬುಡ ಭಾಗದಲ್ಲಿ ಹಳದಿ ಹಾಗೂ ಕಂದು ಬಣ್ಣಕ್ಕೆ ತಿರುಗುವುದು ಬೆಳವಣಿಗೆ ಕುಂಠಿತವಾಗಿ ತೆಂಡೆ ಒಡೆಯುವುದು ತಡವಾಗಲಿದ್ದು ಇದಕ್ಕೆ ಜಿಂಕ್ EDTA ಲಘು ಪೋಷಕಾಂಶಗಳನ್ನು ೧ ಗ್ರಾಂ ಪ್ರತಿ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಎಂದು ಹೇಳಿದರು.

ಹಳದಿ ಕಾಂಡ ಕೊರಕ ಸಮಸ್ಯೆಯಿಂದ ಕಾಂಡದ ಬುಡ ಭಾಗದಲ್ಲಿ ಸಣ್ಣ ರಂಧ್ರ ಮಾಡಿ ಹುಳು ಒಳಗಡೆ ಅಂಗಾಂಶವನ್ನು ತಿನ್ನುತ್ತಿದ್ದು ಇದರಂದ ಸುಳಿ ಬಾಡಿ ಒಣಗುತ್ತದೆ ಅಲ್ಲದೆ ಅಂತಹ ಸುಳಿಯನ್ನು ಕೈಯಿಂದ ಎಳೆದರೆ ಸುಲಭವಾಗಿ ಬರಲಿದ್ದು ಇದಕ್ಕೆ ಫಿಪ್ರೊನಿಲ್ ೦.೩ ಜಿ ಎಕರೆಗೆ ೧೦ ಕೆ. ಜಿ. ಎಕರೆಗೆ ಎರಚುವುದು, ಕ್ಲೋರೋಪೈರಿಪಾಸ್ ೨೦ ಇಅ ೨ ಮಿಲಿ/ಲೀ ನೀರಿಗೆ(೫೦೦ ಮೀ/ಎಕರೆಗೆ) ಬೆರೆಸಿ ಸಿಂಪರಣೆ ಮಾಡಲು ಸೂಚಿಸಿದರು.
ಇನ್ನು ಎಲೆ ಸುರುಳಿ ಕೀಟ ಹಾಗೂ ಎಲೆ ತಿನ್ನುವ ಹುಳು ಸಮಸ್ಯೆಯಿಂದ ಹುಳುಳು ಎಲೆಯನ್ನು ಕೆರೆದು ತಿನ್ನುತ್ತದೆ, ಎಲೆಗಳಲ್ಲಿ ಬಿಳಿ ಕಟಿಗಲು ಕಂಡು ಬರುತ್ತವೆ ಗರಿಗಳನ್ನು ಮಡಚಿ ಕೊಳವೆ ರೂಪದಲ್ಲಿ ಗರಿಗಳ ಮಧ್ಯದಲ್ಲಿ ಹುಳುಗಲಕು ಸೇರಿಕೊಳ್ಳಲಿದ್ದು ಇದನ್ನು ಹೋಗಲಾಡಿಸಲ ಕ್ವಿನಾಲ್ ಪಾಸ್ ೨೫ EC ೨ ಮಿಲಿ/ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು (೫೦೦ ಮಿ.ಲಿ ಎಕರೆಗೆ) ಇಂಡಾಕ್ಸಿಕಾರ್ಬ ೧೪.೫ SC೦.೫ ಮಿಲಿ/ಲೀ ನೀರಿಗೆ ಬೆರೆಸಿ ಸಿಂಪರಣಿ ಮಾಡುವುದು (೧೨೫ ಮಿಲಿ ಎಕರೆಗೆ) ಬೆರಸಿ ಸಿಂಪರಣೆ ಮಾಡುವಂತೆ ಮಾಹಿತಿ ನೀಡಿದರು.
ಇವುಗಳ ಜೊತೆಗೆ ರೈತರು ತಮ್ಮ ಭತ್ತದ ಜಮೀನಿನಲ್ಲಿ ಬೆಳೆಗಳಲ್ಲಿ ರೋಗ ಭಾದೆ ಕಂಡು ಬಂದಲ್ಲಿ ನೇರವಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಿ ಪೀಡೆನಾಶಕಗಳನ್ನು ಬಳಸಬೇಕು.ಮೋಡ ಕವಿದ ವಾತಾರವಣಾ ಇದ್ದರೆ ಸಿಂಪರಣೆಯನ್ನು ಮಾಡಬಾರದು ಜೊತಗೆ ಪೋಟ್ಯಾಪ್ ಕೊರತೆ ಕಂಡು ಬಂದಲ್ಲಿ ಯೂರಿಯಾ ಮೇಲು ಗೊಬ್ಬರದ ಜೊತೆಗೆ ಎಂ.ಒ.ಪಿ. ರಸಗೊಬ್ಬರವನ್ನು ಎಕರೆಗೆ ೨೫ ಕೆ.ಜಿ ಯಷ್ಟು ಹಾಕಬೇಕು ಎಂದು ತಿಳಿಸಿದರು.
