ಮಂಡ್ಯ: ಸುಮಲತಾಗೆ ಮಂಡ್ಯದಲ್ಲಿ ಟಿಕೆಟ್ ನೀಡಬೇಕು ಎಂಬ ನಾರಾಯಣಗೌಡ ಹೇಳಿಕೆ ವಿಚಾರವಾಗಿ ಇಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದು, ನಾರಾಯಣ್ ಗೌಡ ಅವ್ರ ಭಾವನೆ ವ್ಯಕ್ತಪಡಿಸಿದ್ದಾರೆ. ಪಕ್ಷ ಇದನ್ನ ಗಮನದಲ್ಲಿಟ್ಟುಕೊಳ್ಳಲಿದೆ ಎಂದಿದ್ದಾರೆ.
ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಟಿಕೆಟ್ ಕೊಡಬೇಕಾ ಅಥವಾ ಮಿತ್ರ ಪಕ್ಷದಿಂದ ಸ್ಪರ್ಧೆ ಮಾಡ್ತಾರಾ ಅನ್ನೋದನ್ನ ಮುಂದೆ ನೋಡಣಾ ಎಂದ ಅವರು, ಮೊದಲು ಮೈತ್ರಿ ವಿಚಾರದಲ್ಲಿ ಒಗ್ಗಟ್ಟು ಆನಂತರ ಬೇರೆ ವಿಚಾರ ಎಂದರು.
ನಾರಾಯಣಗೌಡರ ಭವಿಷ್ಯಕ್ಕೆ ಧಕ್ಕೆ ಬಂದಾಗ ಸಹಜವಾಗಿ ಬೇಸರ ಇರತ್ತೆ. ನಾರಾಯಣಗೌಡ ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದವ್ರು, ಅವ್ರನ್ನ ನಾವು ವಿಶ್ವಾಸಕ್ಕೆ ತೆಗೆದುಕೊಳ್ತಿವಿ ಎಂದು ತಿಳಿಸಿದರು.