ಬೆಂಗಳೂರು.ಡಿ.25: ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕಾರಣದ ಅಜಾತಶತ್ರು, ಉತ್ತಮ ರಾಜಕೀಯ ಚಿಂತಕರು ಹಾಗೂ ರಾಜಕಾರಣದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಮಹಾನ್ ವ್ಯಕ್ತಿ ಯಾಗಿದ್ದರು. ಅವರ ಆದರ್ಶಮಯ ಜೀವನ ಎಲ್ಲರಿಗೂ ಮಾದರಿ ಎಂದು ಶಾಸಕ ಕೆ.ಗೋಪಾಲಯ್ಯ ಅವರು ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡಿನ ಶಾಸಕರ ಕಛೇರಿಯಲ್ಲಿ ಇಂದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನದ ಉತ್ತಮ ಆಡಳಿತವನ್ನು ನಾವೆಲ್ಲರೂ ಅರಿತು ಅನುಸರಿಸಿಕೊಳ್ಳುಬೇಕು. ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದುಡಿದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಒಂದು ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮೇಯ ಎಸ್.ಹರೀಶ್,
ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ರಾಜ್ಯ ಒಬಿಸಿ ಅಧ್ಯಕ್ಷ ನೆಲ ನರೇಂದ್ರಬಾಬು, ಉತ್ತರ ಘಟಕದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯರಾಮ್, ಡಾ.ಪ್ರಸನ್ನ, ವೆಂಕಟೇಶ್ ಮೂರ್ತಿ, ಅವಿನ್ ಆರಾಧ್ಯ, ಗಂಗಾ ಹನುಮಯ್ಯ, ಎಂ.ಡಿ.ಲಕ್ಷ್ಮೀನಾರಾಯಣ, ನಿಸರ್ಗ ಜಗದೀಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.