Saturday, April 19, 2025
Google search engine

Homeರಾಜ್ಯಸುದ್ದಿಜಾಲಕ್ರೀಡಾಪಟುಗಳು ವಿಜೇತರಾಗಿ ರಾಮನಗರ ಜಿಲ್ಲೆಗೆ ಕೀರ್ತಿ ತನ್ನಿ: ಇಕ್ಬಾಲ್ ಹುಸೇನ್

ಕ್ರೀಡಾಪಟುಗಳು ವಿಜೇತರಾಗಿ ರಾಮನಗರ ಜಿಲ್ಲೆಗೆ ಕೀರ್ತಿ ತನ್ನಿ: ಇಕ್ಬಾಲ್ ಹುಸೇನ್

ರಾಮನಗರ: ಕ್ರೀಡಾ ಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರಲು ದಸರಾ ಕ್ರೀಡಾಕೂಟ ಸುವರ್ಣಾವಕಾಶವಾಗಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಂಡು ರಾಮನಗರ ಜಿಲ್ಲೆಗೆ ಕೀರ್ತಿಯನ್ನು ತಂದುಕೊಡಿ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಗಂಣದಲ್ಲಿ ಆಯೋಜಿಸಲಾಗಿದ್ದು ರಾಮನಗರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ೨೦೨೩-೨೪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಲವಾರು ವರ್ಷಗಳಿಂದ ನಾಡಹಬ್ಬ ಎಂದೆ ಪ್ರಖ್ಯಾತಿ ಹೊಂದಿರುವ ದಸರಾ ಹಬ್ಬವನ್ನು ಸಡಗರ ಮತು ವೈಭೋಗದಿಂದ ಆಚರಣೆ ಮಾಡಿಕೊಂಡು ಬರಲಾಗಿದೆ. ಈ ಹಬ್ಬದ ನೆನೆಪಿಗಾಗಿ ದಸರಾ ಕ್ರೀಡಕೂಟ್ಟವನ್ನು ನಡೆಸಲಾಗುತ್ತಿದೆ. ನಮ್ಮಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರಿಗೆ ಉತ್ತಮವಾದ ವೇದಿಕೆಯು ಸಿಗುವುದಿಲ್ಲ ಅಂತಹವರಿಗೆ ಈ ದಸರಾ ಕ್ರೀಡಾಕೂಟವು ಒಂದು ಉತ್ತಮ ವೇಧಿಕೆಯಾಗಿದೆ ಎಂದರು.
ಕ್ರೀಡಾಪಟುಗಳು ಕ್ರೀಡೆಗಳಲ್ಲಿ ವಿಜೇತರಾಗಿ ತಾಯಿ, ತಂದೆ, ಗುರುಗಳಿಗೆ, ರಾಮನಗರ ಜಿಲ್ಲೆಗೆ ಕೀರ್ತಿ ತರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ, ಉಪಾಧ್ಯಕ್ಷರಾದ ಸೋಮಶೇಖರ್ (ಮಣಿ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ದೈಹಿಕ ಶಿಕ್ಷಕರುಗಳು, ಕ್ರೀಡಾ ಪಟುಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular