ದಾವಣಗೆರೆ: ಕೇರಳದ ಕ್ಯಾಲಿಕಟ್‍ನಲ್ಲಿ ನಡೆಯುವ ದಕ್ಷಿಣ ಭಾರತ ಪುರಷರ ಅಂತರ ವಿಶ್ವವಿದ್ಯಾಲಯದ ಖೋ-ಖೋ ಚಾಂಪಿಯನ್‍ಶಿಪ್ ಪಂದ್ಯವಳಿಗೆ ನಗರದಲ್ಲಿರುವ ಕ್ರೀಡಾ ವಸತಿ ನಿಲಯದ 10 ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯು ಡಿ.30ರಂದು ನಡೆಯಲಿದ್ದು, ನಗರದ ಕ್ರೀಡಾ ವಸತಿನಿಲಯದ ಖೋ-ಖೋ ಕ್ರೀಡಾಪಟುಗಳಾದ ಅರ್ಜುನ (ತಂಡದ ನಾಯಕ), ಮಹಮದ್ ತಾಸೀನ್, ಲಕ್ಷ್ಮಣ, ಶರತ್ ಜೆ.ಜಿ., ಗಗನ್.ಎಸ್, ಸಿದ್ಧರೂಢ ಎಸ್.ಕೆ., ಶರೀಫ್, ವೇಣುಗೋಪಾಲ್, ರವಿಕುಮಾರ್ ಮತ್ತು ಆಸೀಫ್ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.