ಮಂಗಳೂರು (ದಕ್ಷಿಣ ಕನ್ನಡ): ನಮ್ಮ ಪಕ್ಕದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ತುಂಬಾ ಖೇದವಾಗಿದೆ. ನಮ್ಮ ದೇಶದಲ್ಲಿ ಎಲ್ಲಾ ಹಿಂದೂಗಳಿಗೆ ಕೂಡ ಅತ್ಯಂತ ಕಳವಳದ ವಿಚಾರ ಇದು. ಇವತ್ತು ಪಕ್ಕದ ದೇಶದಲ್ಲಷ್ಟೇ ಅಲ್ಲ, ನಮ್ಮ ಸ್ವದೇಶದಲ್ಲೂ ಕೂಡ ಹಿಂದೂಗಳ ಮೇಲೆ ಆಕ್ರಮಣ ಅತಿಯಾಗಿದೆ. ಅದರ ವಿರುದ್ಧವಾಗಿ ಸೊಲ್ಲೆತ್ತುವವರನ್ನು ಕೂಡ ದಮನಿಸುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸಮಾನ ಎಲ್ಲರೂ ಜಾಗೃತರಾಗಬೇಕು ಎಂದು ಉಡುಪಿ ಪೇಜಾವರ ಸ್ವಾಮೀಜಿ ನಗರದಲ್ಲಿಂದು ಹೇಳಿಕೆ ನೀಡಿದ್ದಾರೆ.