Monday, April 7, 2025
Google search engine

Homeಅಪರಾಧಕಾನೂನುಜೂಜು ಅಡ್ಡೆ  ಮೇಲೆ ದಾಳಿ: 30 ಮಂದಿ ಬಂಧನ

ಜೂಜು ಅಡ್ಡೆ  ಮೇಲೆ ದಾಳಿ: 30 ಮಂದಿ ಬಂಧನ

ಮೈಸೂರು : ಜೂಜು ಅಡ್ಡಗಳ ಮೇಲಿನ ದಾಳಿ ಮುಂದುವರೆಸಿರುವ ಸಿಸಿಬಿ ಪೊಲೀಸರು, ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿರುವ ಗಿರಿದರ್ಶಿನಿ ಬಡಾವಣೆಯ ಕಾರಂಜಿ ಕ್ಲಬ್ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 30 ಮಂದಿಯನ್ನು ಬಂಧಿಸಿ, ಪಣಕಿಟ್ಟಿದ್ದ 64,050 ರೂ. ವಶಪಡಿಸಿಕೊಂಡಿದ್ದಾರೆ.

ಕ್ಲಬ್ ನಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪದ ಮೇರೆಗೆ 43 ಲಘು ಪ್ರಕರಣಗಳನ್ನು ದಾಖಲಿಸಿ, ಸ್ಥಳದಲ್ಲೇ 8,600 ರೂ. ದಂಡವಸೂಲಿ ಮಾಡಿದ್ದಾರೆ.                     

 ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ , ಸಿಸಿಬಿ ಎಸಿಪಿ ಎಸ್. ಎನ್. ಸಂದೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮಲ್ಲೇಶ್,ಸಬ್ ಇನ್ಸ್ಪೆಕ್ಟರ್ಗಳಾದ ಪ್ರತಿಭಾ ಜಂಗವಾಡ, ರಾಜು ಕೋನ ಕೇರಿ, ಎಎಸ್ ಐ ರಾಜು, ಸಿಬ್ಬಂದಿಗಳಾದ ಪುರುಷೋತ್ತಮ್, ಮಂಜುನಾಥ್, ಕೆ. ಪುಟ್ಟಮ್ಮ,ಅರುಣ್ ಕುಮಾರ್, ರಘು ಅವರನ್ನ ಒಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

RELATED ARTICLES
- Advertisment -
Google search engine

Most Popular