ಮೈಸೂರು: ವೇಶ್ಯಾವಾಟಿಕೆ ಅಡ್ಡ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.
ಮೈಸೂರು ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರನಗರದ ಆಶ್ರಯ ಯೋಜನೆ ಮನೆಯೊಂದರ ಮೊದಲ ಮಹಡಿಯಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜೂನ್. 28 ರಂದು ದಾಳಿ ಮಾಡಿದ ಪೊಲೀಸರು, ಇಬ್ಬರು ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ 4000 ನಗದು ವಶಕ್ಕೆ ಪಡೆದಿದ್ದಾರೆ ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.