ಮೈಸೂರು : ರಾಜ್ಯದ ಉತ್ತರ ಕರ್ನಾಟಕ ಭಾಗಕ್ಕೆ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ (AIIMS)ಯನ್ನು ಮಂಜೂರು ಮಾಡಬೇಕೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಸಲ್ಲಿಸಿರುವುದಾಗಿ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಈಗಾಗಲೇ ೨೦ AIIMS ಶಿಕ್ಷಣ ಸಂಸ್ಥೆಗಳಿದ್ದು, ೫ AIIMS ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಏಮ್ಸ್ ಸಂಸ್ಥೆ ಆಗಬೇಕಾಗಿದೆ.
ನಾನು ಸೇರಿದಂತೆ ಸಂಸದರಾದ ಯದುವೀರ್‌ಕೃಷ್ಣದತ್ತಒಡೆಯರ್, ಬ್ರಿಜೇಶ್‌ಚೌಟಾ, ಪ್ರಭಾಮಲ್ಲಿಕಾರ್ಜುನ ಜಿ. ಕುಮಾರ್ ನಾಯಕ್ ಎಲ್ಲರೂ ಸೇರಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾಅವರಿಗೆ ಮನವಿ ಸಲ್ಲಿಸಿದ್ದೇವೆ.
ಒಂದು ಏಮ್ಸ್ ಸಂಸ್ಥೆ ಸ್ಥಾಪನೆ ಮಾಡಲು ೧೫೦೦ ಕೋಟಿ ರೂಪಾಯಿ ಬೇಕಾಗುತ್ತದೆ ಎಂದ ಅವರು ಬೆಂಗಳೂರು ನಿಮಾನ್ಸ್ ಆವರಣದಲ್ಲಿ ಪಾಲಿ ಟ್ರಾಮಕೇರ್ ಸೆಂಟರ್‌ಗೆ ಅನುಮೋದನೆ ಕೊಡಲು ಕೇಳಿದ್ದೇವೆ ಹಾಗೂ ರಾಜ್ಯದ ಎಕ್ಸ್‌ಪ್ರೆಸ್ ಹೈವೆಗಳಲ್ಲಿ ೧೨೫ ಕಿ.ಮೀ.ಗೆ ಒಂದು ಪಾಲಿಟ್ರಾಮಕ್ಲಿನಿಕ್ ಸ್ಥಾಪಿಸಲು ಮನವಿ ಮಾಡಿದ್ದು, ಈ ಎಲ್ಲಾ ಬೇಡಿಕೆಗಳಿಗೂ ಆರೋಗ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು ಬೆಂಗಳೂರು ಮೆಟ್ರೋ ೩ನೇ ಫೇಸ್‌ಗೆ ೧೫,೧೪೦ ಕೋಟಿ ರೂಪಾಯಿಗಳ ಅನುಮೋದನೆ ದೊರೆತಿದೆ ಎಂದರು.
ಈ ಸಂದರ್ಭದಲ್ಲಿಡಾ.ಜೆ.ಬಿ. ನರೇಂದ್ರ, ಆಪ್ತ ಸಹಾಯಕಪರಮೇಶ್, ಅವಿನಾಶ್‌ಕೆಸ್ತೂರ್ ಹಾಜರಿದ್ದರು