Friday, April 4, 2025
Google search engine

Homeಅಪರಾಧಬೆಂಗಳೂರು ಪೊಲೀಸ್‌ ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸ್‌ ಆ್ಯಪ್‌ ಖಾತೆ ತೆರೆದು ವಂಚನೆಗೆ ಯತ್ನ

ಬೆಂಗಳೂರು ಪೊಲೀಸ್‌ ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸ್‌ ಆ್ಯಪ್‌ ಖಾತೆ ತೆರೆದು ವಂಚನೆಗೆ ಯತ್ನ

ಬೆಂಗಳೂರು: ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್‌ ಖಾತೆ ತೆರೆದು ವಂಚಿಸಲು ಯತ್ನಿಸಿದ್ದಾನೆ ಎನ್ನಲಾದ ವ್ಯಕ್ತಿಗಾಗಿ ಸೈಬರ್‌ ಕ್ರೈಂ ಠಾಣೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್‌ ಖಾತೆ ತೆರೆದ ಆರೋಪಿಯು ಪೊಲೀಸ್‌ ಕಮಿಷನರ್‌ ಪೋಟೋ ವಾಟ್ಸ್‌ ಆಪ್‌ ಡಿಪಿಗೆ ಹಾಕಿದ್ದ. ಬಳಿಕ ಐ ಆಮ್‌ ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಕಮಿಷನರ್‌ ಎಂದು ಹಲವಾರು ಜನರಿಗೆ ಸಂದೇಶ ಕಳುಹಿಸಿದ್ದ. ಇದು ಸೈಬರ್‌ ಕ್ರೈಂ ಪೊಲೀಸರ ಗಮನಕ್ಕೆ ಬಂದು ನಕಲಿ ಖಾತೆ ಡಿ-ಆಕ್ಟಿವೇಟ್‌ ಮಾಡಿದ್ದಾರೆ. ಕಮಿಷನರ್‌ ಹೆಸರಲ್ಲಿ ಹಣ ವಸೂಲಿಗೆ ಮುಂದಾಗಿರುವ ಆರೋಪ ಕೇಳಿ ಬಂದಿದ್ದು, ಸೈಬರ್‌ ಕ್ರೈಂ ಪೊಲೀಸರಿಂದ ಆರೋಪಿಗಾಗಿ ಶೋಧ ನಡೆಯುತ್ತಿದೆ.

ಕಮಿಷನರ್‌ ಆಪ್ತರು, ಅಪರಿಚಿತರು, ಸಾರ್ವಜನಿಕರು, ಪೊಲೀಸ್‌ ಅಧಿಕಾರಿಗಳಿಗೆ ಆರೋಪಿ ಸಂದೇಶ ಕಳುಹಿಸಿದ್ದ. ಕಮಿಷನರ್‌ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.

RELATED ARTICLES
- Advertisment -
Google search engine

Most Popular