– ಸೋಮವಾರದಿಂದ ಪ್ರತಿದಿನ ರಾಜ್ಯಪಾಲರ ವಿರುದ್ಧ ಕಪ್ಪು ದಿನ ಆಚರಣೆ
ಮಂಡ್ಯ: ಪ್ರಜಾಪ್ರಭುತ್ವ ಚುನಾಯಿತ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಏನು ಕಳ್ಳತನ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ವಿಚಾರವನ್ನು ವಿರೋಧಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾನು ಒಬ್ಬ ಮುಡಾ ಸದಸ್ಯನಾಗಿದ್ದೇನೆ. ಯಾರ ಕಾಲದಲ್ಲಿ 50:50 ಅಡಿ ಸೈಟ್ ಕೊಟ್ಟಿರೋದು? ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಕೊಡಬಾರದಿತ್ತು. ಹಾಗಿದ್ರೆ ಮೊದಲು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ಬಾಮಿ ಮೇಲೆ ಪ್ರಾಷಿಕ್ಯೂಷನ್ ಕೊಡಬೇಕು. ಬಿಜೆಪಿಯವರು ಸ್ವತಂತ್ರ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೆಚ್‌ಡಿಕೆ, ನಿರಾಣಿ ಮೇಲೆ ಪ್ರಾಸಿಕ್ಯೂಷನ್ ಕೇಳಿದ್ದಾರೆ. ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಸಿದ್ದರಾಮಯ್ಯರ ಪರ 135 ಶಾಸಕರಿದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಕೆಳಗಿಳಿಯಲು ಬಿಡಲ್ಲ. ಕಳಂಕರಹಿತ ಸಿಎಂ ಮೇಲೆ ಆಪಾದನೆ ಮಾಡುತ್ತಿರೋದು ಸರಿಯಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸೋಮವಾರದಿಂದ ಪ್ರತಿದಿನ ರಾಜ್ಯಪಾಲರ ವಿರುದ್ಧ ಕಪ್ಪು ದಿನ ಆಚರಣೆ ಮಾಡುತ್ತೇವೆ ಎಂದು ಹರಿಹಾಯ್ದರು.