Friday, April 11, 2025
Google search engine

HomeUncategorizedರಾಷ್ಟ್ರೀಯಪಂಜಾಬ್‌ನ ಮಾಜಿ ಡಿಸಿಎಂ ಸುಖ್ಬೀರ್‌ ಸಿಂಗ್‌ ಬಾದಲ್‌ ಹತ್ಯೆಗೆ ಯತ್ನ

ಪಂಜಾಬ್‌ನ ಮಾಜಿ ಡಿಸಿಎಂ ಸುಖ್ಬೀರ್‌ ಸಿಂಗ್‌ ಬಾದಲ್‌ ಹತ್ಯೆಗೆ ಯತ್ನ

ಅಮೃತಸರ: ಪಂಜಾಬ್‌ನ ಮಾಜಿ ಡಿಸಿಎಂ ಸುಖ್ಬೀರ್‌ ಸಿಂಗ್‌ ಬಾದಲ್‌ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ ಘಟನೆ ಬುಧವಾರ(ಡಿ.4) ನಡೆದಿದೆ.

ಸಿಕ್ಖ್ ಧಾರ್ಮಿಕ ಸಂಸ್ಥೆ ಅಕಾಲ್‌ ತಖ್ತ್‌ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಸುಖ್ಬೀರ್‌ ಸಿಂಗ್‌ ಬಾದಲ್‌ ಅವರನ್ನು ಗುರಿಯಾಗಿರಿಸಿ ಖಾಲಿಸ್ಥಾನ್ ಬೆಂಬಲಿಗ ಎಂದು ಹೇಳಲಾದ ದುಷ್ಕರ್ಮಿ ಗುಂಡು ಹಾರಿಸಿ ಹತ್ಯೆ ಮಾಡಲು ಮುಂದಾಗಿದ್ದ. ಕೂದಲೆಳೆ ಅಂತರದಲ್ಲಿ ಬಾದಲ್ ಪಾರಾಗಿದ್ದು ಸ್ಥಳದಲ್ಲಿದ್ದವರು ದುಷ್ಕರ್ಮಿಯನ್ನು ತಡೆದಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.

ಸುಖ್ಬೀರ್‌ ಸಿಂಗ್‌ ಬಾದಲ್‌ ತಮ್ಮ ಶಿಕ್ಷೆಯನ್ನು ಮಂಗಳವಾರದಿಂದ ಸ್ವೀಕರಿಸಲು ಪ್ರಾರಂಭಿಸಿದ್ದರು. ಕುತ್ತಿಗೆಗೆ ಫ‌ಲಕ, ಕೈಯಲ್ಲಿ ಈಟಿ ಹಿಡಿದ ಸುಖ್ಬೀರ್‌ ಸಿಂಗ್‌, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸುತ್ತಿದ್ದರು.

ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ದೌಡಾಯಿಸಿದ್ದು, ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್‌ ಸಿಂಗ್‌ ಮಜೀಠಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು.

RELATED ARTICLES
- Advertisment -
Google search engine

Most Popular