Friday, April 18, 2025
Google search engine

Homeಅಪರಾಧಬೆಂಗಳೂರಲ್ಲಿ ಸರಗಳ್ಳತನಕ್ಕೆ ಯತ್ನ

ಬೆಂಗಳೂರಲ್ಲಿ ಸರಗಳ್ಳತನಕ್ಕೆ ಯತ್ನ

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರವನ್ನು ಕಳ್ಳ ಖದೀಯಲು ಯತ್ನಿಸಿದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ.

ಜೂನ್ 25 ರ 7.30 ರ ಸುಮಾರಿಗೆ ಸ್ವಪ್ನ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಮಹಿಳೆಯ ಸರ ಕಸಿದು ಪರಾರಿಯಾಗಲು ಖದೀಮ ಯತ್ನಿಸಿದ್ದಾನೆ. ತಕ್ಷಣ ಸ್ವಪ್ನ ಚೀರಿಕೊಂಡಿದ್ದಾರೆ. ಇದರಿಂದ ಕಳ್ಳ ಸರ ಬಿಟ್ಟು ಓಡಿ ಹೋಗಿದ್ದಾನೆ.

ಇನ್ನು ಎದುರಿನಿಂದ ಬರುತ್ತಿದ್ದ ಸ್ವಪ್ನ ತಾಯಿ ಮತ್ತು ಸಹೋದರು ಸರಗಳ್ಳನನ್ನ ಹಿಡಿಯಲು ಯತ್ನಿಸಿದ್ದಾರೆ. ಆದರೆ ಮಾರಕಾಸ್ತ್ರ ತೋರಿಸಿ ಕಳ್ಳ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular