ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಈಗಾಗಲೆ ಪುರಸಭೆ ನಿರ್ಣಯದಂತೆ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಆನ್‌ಲೈನ್ ಮೂಲಕ ಬಹಿರಂಗ ಹರಾಜು ಮಾಡುವ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಬುಧವಾರ ಬೆಳಿಗ್ಗೆ ಬೀಗ ಜಡಿದರು.
ಬೀಗದ ಚೀಲ ಹಾಗೂ ಮಳಿಗೆ ಮಾಹಿತಿಯೊಂದಿಗೆ ಬುಧವಾರ ಮುಂಜಾನೆ ರಸ್ತೆಗಳಿದ ಪುರಸಭೆ ಸಿಬ್ಬಂದಿಗಳು ಬಜಾರ್‌ರಸ್ತೆ, ಚಂದ್ರಮೌಳೇಶ್ವರರಸ್ತೆ, ವಾಣಿವಿಲಾಸರಸ್ತೆಯಲ್ಲಿರುವ ಮಳಿಗೆ ಸೇರಿದಂತೆ ಒಟ್ಟು ೭೪ ಮಳಿಗೆಗಳಿಗೆ ಬೀಗ ಜಡಿದರು.
ಕಳೆದ ಸೋಮವಾರ ಪುರಸಭೆ ಸಭಾಂಗಣದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಶ್ ಸುಮೈರ್ ಅವರ ಅಧ್ಯಕ್ಷತೆಯಲ್ಲಿ, ಪುರಸಭೆ ಸದಸ್ಯರನ್ನೊಳಗೊಂಡoತೆ ನಡೆದ ಆನ್‌ಲೈನ್ ಸಭೆಯಲ್ಲಿ ಪುರಸಭೆ ನಿಧಿಯಲ್ಲಿ ನಿರ್ಮಾಣ ಮಾಡಲಾಗಿರುವ ೭೨ಮಳಿಗೆ, ಐಡಿಎಸ್‌ಎಂಟಿ ೨ ಸೇರಿದಂತೆ ಸೆಲ್ಲಾರ್ ಜಾಗವನ್ನು ಹರಾಜು ಹಾಕಲು ತೀರ್ಮಾನಿಸಲಾಗಿತ್ತು.
ಮಳಿಗೆಗಳ ಹರಾಜು ಪೂರ್ಣ ಪ್ರಕ್ರಿಯೆ ಇ ಟೆಂಡರ್ ಮೂಲಕ ನಡೆಯಲಿದ್ದು ಹರಾಜಿನಲ್ಲಿ ಭಾಗವಹಿಸಿ ಟೆಂಡರ್‌ನಲ್ಲಿ ಮಳಿಗೆ ಪಡೆದವರು ೭೫ ಮಂದಿ ಮಳಿಗೆದಾರರು ಮುಂದಿನ ೧೨ ವರ್ಷಗಳ ಕಾಲ ಪುರಸಭೆ ಜೊತೆ ಅಂಗ್ರಿಮೆAಟ್ ಮಾಡಿಕೊಂಡು ವಹಿವಾಟು ನಡೆಸಲಿದ್ದಾರೆ.
ಈಗಾಗಲೆ ಹೊಸ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಫೆ.೨೭ರವರೆಗೆ ೧೫ ದಿನಗಳ ಕಾಲ ಇ ಪ್ರಕೂರ್‌ಮೆಂಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು ಫೆ.೨೮ರಂದು ಬಿಡ್ ನಡೆಸಲಾಗುವುದು ಎಂದು
ಈಗಾಗಲೆ ಮಾಹಿತಿ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಹೆಚ್ಚಿನ ಮಾಹಿತಿಯನ್ನು ಪುರಸಭೆ ಕಛೇರಿಯ ಕಂದಾಯ ವಿಭಾಗದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.