ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಈಚೆಗೆ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವಿವಿಧ ಬಾಬ್ತುಗಳ ಹರಾಜು ಪ್ರಕ್ರಿಯೆಯು ವ್ಯವಸ್ಥಾಪನಾ ಸಮಿತಿ ಹಾಗೂ ದೇಗುಲದ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಈಚೆಗೆ ಬೆಟ್ಟದ ಬಿಳಿಗಿರಿ ಭನದಲ್ಲಿ ನಡೆಯಿತು.
ಲಾಡು ಪ್ರಸಾದ ಮಾರಾಟ ಹಕ್ಕು, ಕಲ್ಲುಸಕ್ಕರೆ ಕೊಬ್ಬರಿ ಪ್ರಸಾದ, ದೇವರ ಪೋಟೋ ಮಾರಾಟ ಹಕ್ಕು, ವಾಹನ ಪ್ರವೇಶ ಶುಲ್ಕ, ನೆಲಸುಂಕ ವಸೂಲಾತಿ, ಹಕರೆ ಮುಡಿ ಹಕ್ಕು, ಕ್ಷಣಮಾತ್ರದಲ್ಲಿ ಛಾಯಾಚಿತ್ರ ತೆಗೆಯುವ ಹಕ್ಕು ಮತ್ತು ಪಾದರಕ್ಷೆ ಸಂರಕ್ಷಣೆ ಹಕ್ಕುಗಳಿಗೆ ಹರಾಜು ನಡೆಯಿತು. ಇದರಲ್ಲಿ ಪಾದರಕ್ಷೆ ಸಂರಕ್ಷಣೆಗೆ ಯಾರೂ ಹರಾಜಿನಲ್ಲಿ ಭಾಗವಹಿಸದಿರುವುದರಿಂದ ಇದನ್ನು ಹೊತರು ಪಡಿಸಿ ಇತರೆ ಬಾಬ್ತುಗಳನ್ನು ಹರಾಜು ಮಾಡಲಾಯಿತು. ಒಟ್ಟು ೨೯.೨೯ ಲಕ್ಷ ರೂ.ಗಳಿಗೆ ಈ ಹಕ್ಕುಗಳನ್ನು ಹರಾಜಿನ ಬಿಡ್ಡುದಾರರು ಕೂಗುವ ಮೂಲಕ ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಅನೇಕ ಟೆಂಡರ್‌ದಾರರು ಬಿಡ್ ಮಾಡಿದ ಬಾಕಿ ಮೊತ್ತವನ್ನು ಪಾವತಿಸಿಲ್ಲ ಎಂಬ ದೂರಿದೆ. ಅಂತಹವರಿಂದ ಬಾಕಿ ಮೊತ್ತವನ್ನು ವಸೂಲಿ ಮಾಡಲು ಕ್ರಮ ವಹಿಸಬೇಕು. ಈಗ ಭಾಗವಹಿಸಿ ಟೆಂಡರ್ ತಮ್ಮದಾಗಿಸಿಕೊಂಡಿರುವ ಬಿಡ್‌ದಾರರು ಮೂರು ತಿಂಗಳೊಳಗೆ ಟೆಂಡರ್‌ನ ಪೂರ್ಣ ಮೊತ್ತವನ್ನು ಕಟ್ಟಬೇಕು. ಇಲ್ಲವಾದಲ್ಲಿ ಈ ಟೆಂಡರ್ ರದ್ದುಪಡಿಸಿ ಮತ್ತೆ ಹೊಸ ಟೆಂಡರ್ ಮಾಡಲಾಗುವುದು. ಈ ಬಗ್ಗೆ ಸಂಬಂಧಪಟ್ಟ ದೇಗುಲದ ಅಧಿಕಾರಿ ಹಾಗೂ ನೌಕರ ವರ್ಗ ಎಲ್ಲರಿಗೂ ಮಾಹಿತಿ ನೀಡಿ ದೇಗುಲಕ್ಕೆ ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಸುರೇಶ್, ನಾರಾಯಣಸ್ವಾಮಿ ಪಾರು ಪತ್ತೇದಾರ ರಾಜು, ಶೇಷಾದ್ರಿ ಸೇರಿದಂತೆ ಬಿಡ್‌ದಾರರು ಇದ್ದರು.