Tuesday, April 7, 2026
Google search engine

Homeರಾಜಕೀಯಆಟೋ LPG ಕೊರತೆ ಹಿನ್ನೆಲೆ : ಪೆಟ್ರೋಲ್ ಬಳಕೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ...

ಆಟೋ LPG ಕೊರತೆ ಹಿನ್ನೆಲೆ : ಪೆಟ್ರೋಲ್ ಬಳಕೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ

ದಾವಣಗೆರೆ : ದೇಶದಲ್ಲಿ ಆಟೋ LPG ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಆಟೋ ಚಾಲಕರು LPG ಬದಲು ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ. ಅಲ್ಲದೆ ಪೆಟ್ರೋಲ್ ದೇಶದಲ್ಲಿ ಯಾವಾಗಲೂ ಲಭ್ಯವಿರುತ್ತದೆ. ಆದರೆ ಆಟೋ LPG ವಿಶ್ವದ ಕೆಲವೇ ದೇಶಗಳಲ್ಲಿ ಮಾತ್ರ ಸಿಗುತ್ತದೆ ಎಂದರು.

ಈ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 372 ಆಟೋ LPG ವಿತರಣಾ ಕೇಂದ್ರಗಳಿದ್ದು, ಸರ್ಕಾರವು ಕೇವಲ 72 ಕೇಂದ್ರಗಳನ್ನು ಮಾತ್ರ ನಡೆಸುತ್ತಿದೆ. ಉಳಿದ 300 ಕೇಂದ್ರಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ, LPG ದರವನ್ನು ಪ್ರತಿ ಕಿಲೋಗ್ರಾಂಗೆ 110ರೂಪಾಯಿಗಳವರೆಗೆ ಹೆಚ್ಚಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಆಟೋ LPG ದರವನ್ನು ಹೆಚ್ಚಿಸಿಲ್ಲ. ಆದ್ದರಿಂದ ಸರ್ಕಾರದ ಕೇಂದ್ರಗಳಲ್ಲಿ LPG ಪ್ರತಿ ಕಿಲೋಗ್ರಾಂಗೆ ಸುಮಾರು 89 ರೂಪಾಯಿಗಳಷ್ಟಿದೆ ಎಂದರು.

ʼದೇಶದಲ್ಲಿ ಸುಮಾರು 60 ಶೇಕಡಾ LPG ಉತ್ಪಾದನೆಯಾಗುತ್ತಿದ್ದು, ಉಳಿದ 40 ಶೇಕಡಾವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಆಟೋ LPG ಸಂಪನ್ಮೂಲಗಳು ಸೀಮಿತವಾಗಿರುವುದರಿಂದ, ದೇಶದಾದ್ಯಂತ ಸರ್ಕಾರದ ಆಟೋ LPG ಕೇಂದ್ರಗಳಲ್ಲಿ ಉದ್ದ ಸಾಲುಗಳು ಕಂಡುಬರುತ್ತಿವೆ ಎಂದರು.

ಇನ್ನು ವಾಣಿಜ್ಯ ಸಿಲಿಂಡರ್‌ಗಳ ವಿತರಣೆ ಈಗ 70 ಶೇಕಡಾವರೆಗೆ ಹೆಚ್ಚಿಸಲಾಗಿದೆ. ಆದ್ದರಿಂದ ಜಾಗತಿಕ ಸಮಸ್ಯೆಯನ್ನು ರಾಜಕೀಯಗೊಳಿಸುವುದರಲ್ಲಿ ಅರ್ಥವಿಲ್ಲ, ಹಿಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೇಳಿಕೆ ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿದೆ. ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಹೇಳಿದ್ದರು.

ಆದರೆ ಆ ಸಮಯದಲ್ಲಿ ಇಂಧನ ಲಭ್ಯತೆ ಇದ್ದಿತು. ಆದರೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪರಿಸ್ಥಿತಿಯನ್ನು ಹದಗೆಡಿಸಿತು ಎಂದರಲ್ಲದೆ, ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ, ಜೊತೆಗೆ, ನಿರಂತರವಾಗಿ ತೈಲ ಸರಬರಾಜು ನಡೆಯುತ್ತಿರುವುದರಿಂದ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಸಹ ಪ್ರಹ್ಲಾದ್ ಜೋಶಿ ತಿಳಿಸಿದರು.

RELATED ARTICLES
- Advertisment -
Google search engine

Most Popular