Saturday, April 19, 2025
Google search engine

Homeಸ್ಥಳೀಯಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ


ಮೈಸೂರು: ಮುಂಗಾರು ಮಳೆ ವಿಳಂಭವಾಗಿರುವ ಹಿನ್ನಲೆಯಲ್ಲಿಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ ಬಗ್ಗೆ, ಸ್ಮಶಾನ ಹಾಗೂ ಇನ್ನಿತರಉದ್ದೇಶಕ್ಕೆಜಮೀನಿನ ಲಭ್ಯತೆಕುರಿತುಅಗತ್ಯಕ್ರಮ ವಹಿಸುವಂತೆಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.
ಇಂದುತಮ್ಮಕಛೇರಿಯಲ್ಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆ ಹಾಗೂ ಮೇವು ಪೂರೈಕೆ ಸಂಬoಧತಾಲ್ಲೂಕು ಮಟ್ಟದಲ್ಲಿ ಪ್ರತಿ ಶನಿವಾರಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಬೇಕು. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಕುರಿತು ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯಇಲಾಖೆಯ ಸಹಾಯಕಕಾರ್ಯಪಾಲಕಅಭಿಯಂತರರು, ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರಬೇಕು. ಮಳೆಯಿಂದ ಮನೆಗಳ ಹಾನಿ ಕುರಿತು ಪರಿಹಾರ ಪಾವತಿ ಸಂಬಂಧಗ್ರಾಮ ಆಡಳಿತಾಧಿಕಾರಿ, ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ರವರುಜಂಟಿಯಾಗಿ ಪರಿಶೀಲಿಸಿ ಛಾಯಾಚಿತ್ರದೊಂದಿಗೆ ವರದಿ ನೀಡಬೇಕುಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿಯವರು ಮಾತನಾಡಿ, ಬೋರ್‌ವೆಲ್‌ಗಳ ದುರಸ್ಥಿ, ರೀ-ಡ್ರಿಲ್ಲಿಂಗ್, ಕಲುಷಿತ ನೀರು ಪೂರೈಕೆಯಾಗದಂತೆ ಹಾಗೂ ಜಾನುವಾರುಗಳ ಕುಡಿಯುವ ನೀರಿನಕಟ್ಟೆ ನಿರ್ಮಾಣ ಮಾಡಲುಕ್ರಮ ವಹಿಸಬೇಕೆಂದು ತಿಳಿಸಿದರು.
ಬದಲಿ ಮೋಟಾರ್ ವ್ಯವಸ್ಥೆ, ಹೊಸ ಬೋರ್‌ವೆಲ್ ವಿಫಲವಾದಲ್ಲಿ ಭೂವಿಜ್ಞಾನಿಗಳಿಂದ ತಪಾಸಣೆ ನಡೆಸಿ ಹೊಸ ಬೋರ್‌ವೆಲ್‌ಕೊರೆಯಲುಕ್ರಮವಹಿಸಬೇಕು. ಶಾಲೆ, ಅಂಗನವಾಡಿ, ಹಾಸ್ಟೆಲ್‌ಗಳಲ್ಲಿ ಸಮರ್ಪಕಕುಡಿಯುವ ನೀರು ಲಭ್ಯತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವ ಸಂಬಂಧ ಖಾಸಗಿ ಬೋರ್‌ವೆಲ್‌ಗಳ ಲಭ್ಯತೆ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಪಡೆಯಬೇಕುಎಂದರು.
ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯ ಸಹಾಯಕಕಾರ್ಯಪಾಲಕಅಭಿಯಂತರರು, ಕುಡಿಯುವ ನೀರಿನಗುಣಮಟ್ಟದ ಬಗ್ಗೆ ನಿರಂತರವಾಗಿ ಪರಿಶೀಲಿಸಬೇಕು ಹಾಗೂ ನೀರಿನ ಮೂಲಗಳ ಬಗ್ಗೆ ಅವರಲ್ಲಿ ಮಾಹಿತಿಇರಬೇಕು. ನಗರ ಮತ್ತುಗ್ರಾಮಾಂತರ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿದ್ದಲ್ಲಿಅದರ ಬಗ್ಗೆ ಪ್ರತಿ ದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಸಂಬoಧ ಮುಂದಿನ ಒಂದು ತಿಂಗಳಿಗೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆಜಿಲ್ಲಾ ನಗರಾಭಿವೃದ್ಧಿಕೋಶದಯೋಜನಾ ನಿರ್ದೇಶಕರಿಗೆ ತಿಳಿಸಿದರು. ಜಾನುವಾರುಗಳಿಗೆ ಮೇವು ಲಭ್ಯತೆ ಬಗ್ಗೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಪಡೆದು ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆಕ್ರಮವಹಿಸಲು ಸೂಚಿಸಿದರು.
ಸ್ಮಶಾನ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾಯ್ದಿರಿಸಿ ಹಸ್ತಾಂತರಿಸುವಕುರಿತುಗ್ರಾಮ ಆಡಳಿತಾಧಿಕಾರಿಗಳು, ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳು ಕಂದಾಯ ಗ್ರಾಮಗಳಲ್ಲಿನ ಸ್ಮಶಾನಗಳಿಗೆ ಜಂಟಿಯಾಗಿ ತೆರಳಿ ಸ್ಮಶಾನದಜಮೀನಿನ ಛಾಯಾಚಿತ್ರತೆಗೆದು ಸದರಿಛಾಯಾಚಿತ್ರವನ್ನು ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಬೇಕು. ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಸದರಿ ಛಾಯಾಚಿತ್ರಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕುಎಂದರು.
ಸ್ಮಶಾನ ಹಸ್ತಾಂತರಿಸಲು ಬಾಕಿ ಇರುವ ಪ್ರಕರಣಗಳಲ್ಲಿ ನಕ್ಷೆ, ಮಂಜೂರಾತಿಆದೇಶದ ಪ್ರತಿಯೊಂದಿಗೆ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲುಕ್ರಮವಹಿಸಬೇಕು. ಕೆಲವು ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಗಾಗಿ ಪಹಣಿಯಲ್ಲಿ ಸ್ಮಶಾನಕ್ಕೆ ಕಾಯ್ದಿರಿಸಿರುವ ಬಗ್ಗೆ ದಾಖಲಾಗಿಲ್ಲದಿದ್ದರೂ ಸಹಾ ನಕ್ಷೆ, ಮಂಜೂರಾತಿಆದೇಶದ ಮೇರೆಗೆ ಹಸ್ತಾಂತರಿಸಲುಕ್ರಮವಹಿಸಬೇಕು ಎಂದು ಮಾಹಿತಿ ನೀಡಿದರು.
ಘನತ್ಯಾಜ್ಯ ವಿಲೇವಾರಿಘಟಕ ಹಾಗೂ ಸಾರ್ವಜನಿಕಗ್ರಂಥಾಲಯ ನಿರ್ಮಾಣಕ್ಕೆಜಮೀನು ಗುರುತಿಸಿಕೊಡುವ ಸಂಬoಧ ಸೂಕ್ತ ಸರ್ಕಾರಿಜಮೀನುಗುರುತಿಸಲು ಹಾಗೂ ಓವರ್ ಹೆಡ್‌ಟ್ಯಾಂಕ್ ನಿರ್ಮಾಣ ಮಾಡಲುಅಗತ್ಯವಿರುವ ಗ್ರಾಮಗಳಿಗೆ ಸೂಕ್ತ ಸರ್ಕಾರಿಜಮೀನುಗುರುತಿಸಲುರಾಜಸ್ವ ನಿರೀಕ್ಷಕರಿಗೆ ಸೂಚಿಸಿದರು
ಸಭೆಯಲ್ಲಿಅಪರ ಜಿಲ್ಲಾಧಿಕಾರಿಗಳಾದ ಕವಿತಾರಾಜರಾಮ್, ಹುಣಸೂರು ಉಪವಿಭಾಗಾಧಿಕಾರಿಗಳಾದ ರುಚಿಜಿಂದಾಲ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular