ಮಂಡ್ಯ: ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡರ ೧೦ನೇ ಪುಣ್ಯ ಸ್ಮರಣೆ ಹಿನ್ನಲೆ ೧೦ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ. ವಳಗೆರೆಹಳ್ಳಿ ಗ್ರಾಮದ ಎಸ್.ಡಿ.ಜಯರಾಮ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ಡಿ.ಕರಡೀಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್, ಗೀತಾ .ಶಿವರಾಜ್ ಕುಮಾರ್, ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ, ಉಚ್ಚನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ಪೂರ್ಣ ಕುಂಭದೊಂದಿಗೆ ಬೆಳ್ಳಿರಥದ ಮೂಲಕ ಬೆಳ್ಳಿ ರಥದ ಮೂಲಕ ವೇದಿಕೆರೆ ಕೆರೆ ತಂದ ಗ್ರಾಮಸ್ಥರು ಸ್ವಾಗತಿಸಿದರು.

ಅಪ್ಪು ಹಾಗೂ ಡಿ.ಕರಡೀಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಟ ಶಿವರಾಜ್ ಕುಮಾರ್. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಷ್ಪಾರ್ಚನೆ ಸಲ್ಲಿಸಿದರು. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸಿದ ವ್ಯಕ್ತಿಗಳನ್ನ ಗುರ್ತಿಸಿ ಸನ್ಮಾನ ಮಾಡುವುದು ಅರ್ಥಪೂರ್ಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಒಳ್ಳೆಯದು ಡಾ.ಶಿವರಾಜ್ ಕುಮಾರ್ ಅವರು ಉತ್ತಮ ಸಾಧಕ ಅವರ ಮೇಲೆ ಜನರು ಸಾಕಷ್ಟು ಪ್ರೀತಿ ಇಟ್ಟಿದ್ದಾರೆ. ಅವರಿಗೆ ಸನ್ಮಾನ ಮಾಡ್ತಿರೋದು ಸಂತೋಷ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿರು.
ಪ್ರೋ ಜಯದೇವ ಅವರಿಗೂ ಕರ್ನಾಟಕ ಲೊಕಾಯುಕ್ಕೆ ಬಂದ ಮೇಲೆ ಸಮಾಜದ ಬಗ್ಗೆ ತಿಳಿಯಿತು. ಸಮಾಜ ತಪ್ಪು ಮಾಡಿದವರನ್ನ ಶಿಕ್ಷಿಸುತ್ತಿತ್ತು. ಜೈಲಿಗೆ ಹೋದವರ ಜೊತೆ ಹೋಗಬೇಡ ಅಂತಿದ್ರು. ಇವತ್ತು ಶ್ರೀಮಂತಿಕೆ ಗೌರವಿಸುವ ಕೆಲಸ ಆಗ್ತಿದೆ. ಶ್ರೀಮಂತ ನಾಗುವುದು ತಪ್ಪಿಲ್ಲ, ಇನ್ನೊಬ್ಬರ ಜೇಬಿಗೆ ಕೈ ಹಾಗಬಾರದು. ಸಮಾಜ ಬದಲಾವಣೆಯಾಗಬೇಕು. ತೃಪ್ತಿ ಇದ್ರೆ ಯಾವ ರೋಗ ಬರಲ್ಲ, ತೃಪ್ತಿ ಅಳವಡಿಸಿಕೊಳ್ಳಿ. ಮಾನವೀಯತೆ ನಮ್ಮ ಹಿರಿಯರು ಕಟ್ಟಿದ ಮೌಲ್ಯ. ಮೊದಲು ಮಾನವನಾಗಬೇಕು ಎಂದು ಕಿವಿ ಮಾತು ಹೇಳಿದರು.
