Friday, April 4, 2025
Google search engine

Homeರಾಜ್ಯಸುದ್ದಿಜಾಲಮೈಸೂರಿನ ಶ್ರೀರಾಂಪುರ ಸಂಕಷ್ಟಹರ ಗಣಪತಿ‌ ದೇವಸ್ಥಾನದಲ್ಲಿ ಶ್ಲೋಕ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನ

ಮೈಸೂರಿನ ಶ್ರೀರಾಂಪುರ ಸಂಕಷ್ಟಹರ ಗಣಪತಿ‌ ದೇವಸ್ಥಾನದಲ್ಲಿ ಶ್ಲೋಕ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನ

ಮೈಸೂರು: ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ ಕಾರ್ಯಕ್ರಮ, ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮೈಸೂರಿನ ಶ್ರೀರಾಂಪುರ ಸಂಕಷ್ಟಹರ ಗಣಪತಿ‌ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಅಯೋಧ್ಯಾ ಶ್ರೀರಾಮ ಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥ ವಿತರಣೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ನಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಸ್ವಾಮಿ ಸರ್ವ ಜಯಾನಂದ ಮಹಾರಾಜ್ ಜ್ಯೋತಿ ಬೆಳಗಿಸಿ , ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸನಾತನ ಹಿಂದೂ ಧರ್ಮದ ಆದರ್ಶ ಗಳಿಸಿರುವುದು ನಮ್ಮ ರಾಮಾಯಣ, ಮಹಾಭಾರತದದ ಕಥೆಗಳಲ್ಲಿ ಅದನ್ನು ಇಂದು ನಮ್ಮ ಮಕ್ಕಳಿಗೆ ಕಲಿಸದಿದ್ದರೆ ಮುಂದೆ ರಾಮ ಕೃಷ್ಣರನ್ನೇ ಮರೆಯ ಬಹುದು, ನಾವು ಇಂದು ಪ್ರಾಪಂಚಿಕ ವಸ್ತುಗಳ ಮೇಲೆ ಪ್ರೀತಿಯನ್ನು ಹೊಂದುತ್ತಿದ್ದೇವೆ ಆದರೆ ನಾವು ಪ್ರೀತಿಸ ಬೇಕಾದುದು ದೇವರನ್ನು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ.ಆರ್. ನಾಗರಾಜ್ ಮಾತನಾಡಿ ಅಯೋಧ್ಯಾ ರಾಮಮಂದಿರದ ಹೋರಾಟದ ನೇತೃತ್ವವನ್ನು ವಹಿಸಿದ್ದ ವಿಶ್ವ ಹಿಂದೂ ಪರಿಷತ್ ರಾಮಮಂದಿರ ಲೋಕಾರ್ಪಣೆ ಮಾಡಿಸುವುದರಲ್ಲಿ ಪರಿಷತ್ ನ ಪರಿಶ್ರಮ ಅವಿಸ್ಮರಣೀಯ. ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣದ ನಿರ್ಧಾರದಿಂದ ರಥಯಾತ್ರೆ, ಇಟ್ಟಿಗೆ ಸಂಗ್ರಹ , ಕಾಣಿಕೆ ಸ್ವೀಕಾರ, ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸಿದರು.

ಆದರೆ ಇಂದು ಸಹ ಲಕ್ಷಾಂತರ ಜನ ರಾಮಮಂದಿರ ನೋಡಲು ಸಾಧ್ಯವಾಗಿಲ್ಲ ಆ ಕೊರತೆ ನಿವಾರಿಸಲು ಮೈಸೂರಿನಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥ ವಿತರಣೆ ಮಾಡಿ ಮೈಸೂರಿನ ಜನತೆಗೆ ಶ್ರೀರಾಮನ ಅನುಗ್ರಹ ಕೊಡಿಸುವ ಕಾರ್ಯವನ್ನು ಮಾಡಲು ವಿಶ್ವ ಹಿಂದೂ ಪರಿಷತ್ ನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ವೆಂಕಟರಾಮ್ ರವರು ಮಾತನಾಡಿ ಭಾರತದ ವಿಭಜನೆ ಇಂದ ಹಿಡಿದು ಇಂದಿನ ತನಕ ಹಲವು ಆತಂಕವನ್ನು ಭಾರತ ಎದುರಿಸುತ್ತಿದೆ ನಾವು ಸಂಘಟಿತರಾದರೆ ಮಾತ್ರ ಆತಂಕ ನಿವಾರಣೆ ಸಾಧ್ಯ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ‌ ಸಹಭಾಗಿತ್ವದಲ್ಲಿ ಸುಮಾರು 75 ಮಕ್ಕಳಿಗೆ ಶ್ಲೋಕ, ಸಂಸ್ಕಾರ, ಪುರಾಣದ ಕಥೆಗಳ ಒಂದು ತಿಂಗಳ ಶಿಬಿರ ಮಾಡಲಾಗಿತ್ತು.

ಶಿಬಿರದಲ್ಲಿ ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಮಹೇಶ್ ಕಾಮತ್ ಮಕ್ಕಳಲ್ಲಿ ಇಂದು ನಾವು ಸಂಸ್ಕಾರವನ್ನು ಕಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನಾವೇ ಜವಾಬ್ದಾರರು ಹಾಗಾಗಿ ಮಕ್ಕಳು ಪ್ರತಿ ನಿತ್ಯ ಮನೆಯಲ್ಲಿ ಶ್ಲೋಕ, ಪುರಾಣದ ಕಥೆಗಳು, ಭಗವದ್ಗೀತೆ ಓದಬೇಕೆಂದು ತಿಳಿಸಿದರು.

ಮೂಕಾಂಬಿಕಾ ಸತ್ಸಂಗದ ಸದಸ್ಯರಿಂದ ಭಜನೆ ಹಾಗೂ ದೇವರ ನಾಮಗಳನ್ನು ಹಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುವೆಂಪು ನಗರ ವಸತಿ ಸಂಘಚಾಲಕರಾದ ಗಣೇಶ್ ಜಿ.ಎಸ್ ರವರು ಗಣ್ಯರಿಗೆ ರಕ್ಷಾಬಂಧನ ಕಟ್ಟಿದರು.

ಈ ಸಂದರ್ಭದಲ್ಲಿ ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶಿವಪ್ಪ, ಮುರಳಿ, ಜಯರಾಂ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮಧುಶಂಕರ್, ಸಹಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಶ್ರೀಮತಿ ಜಯಶ್ರೀ ಶಿವರಾಂ, ಅಂಬಿಕಾ ಜೀವನ್, ಜನಾರ್ಧನ್ ರಾವ್, ಮಮತಾ, ಶೈಲಜಾ ನಾಗಸುದೀಂದ್ರ, ಜ್ಯೋತಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular