ಮೈಸೂರು:ಮೈಸೂರಿನ ಪತ್ರಿಕಾ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ್ ರವರಿಗೆ ವನ್ಯಜೀವಿ ಸಂರಕ್ಷಣಾ ವಿಭಾಗದ ಅಡಿಯಲ್ಲಿ ಲಿನೆನ್ ಕ್ಲಬ್ ನೇಚರ್ ಇನ್ ಫೋಕಸ್ ಫೆಸ್ಟಿವಲ್ ಹಾಗೂ ಪ್ರಶಸ್ತಿ ಸಂಸ್ಥೆ ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ಧ ಸ್ಪರ್ಧೆಯಲ್ಲಿ ಪ್ರಸಿದ್ಧ ವನ್ಯಜೀವಿ ಸಂರಕ್ಷಣಾ ಛಾಯಾಗ್ರಾಹಕ ರಾಮ್ ಕಿ ಸ್ಮರಣಾರ್ಥ ಗೌರವ ಪ್ರಶಸ್ತಿಯನ್ನು ಪಡೆದರು. ಪಿರಿಯಾಪಟ್ಟಣದಲ್ಲಿ ಕಾಡು ಆನೆ ಸೆರೆ ಹಿಡಿಯುವ ಛಾಯಾಚಿತ್ರ ಪ್ರಶಸ್ತಿ ಪಡೆದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಬೆಂಗಳೂರಿನ ಜಯಮಹಲ್ ಅರಮನೆಯಲ್ಲಿ ನಡೆಯಿತು. ಖ್ಯಾತ ವನ್ಯ ಜೀವಿ ಸಂರಕ್ಷಣಾ ಛಾಯಾಗ್ರಾಹಕ ದಿವಂಗತ ರಾಮ್ ಕಿ ಸಹೋದರ ಸ್ವಾಮಿನಾಥನ್ ಪ್ರಶಸ್ತಿಯನ್ನು ವಿತರಿಸಿದರು ಮತ್ತು ಈ ಸಂದರ್ಭದಲ್ಲಿ ಖ್ಯಾತ ನಟಿ ದಿಯಾ ಮಿರ್ಜಾ ಉಪಸ್ಥಿತರಿದ್ದರು.
