ಧಾರವಾಡ : ದಾವಣಗೇರಿ ಜಿಲ್ಲೆಯ ಹರಿಹರದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಹಾಗೂ 15 ರಿಂದ 17 ವಯೋಮೀತಿ ಒಳಗಿನ ರಾಷ್ಟ್ರ ಮಟ್ಟದ ಕುಸ್ತಿ ಆಯ್ಕೆ ಪ್ರಕ್ರೀಯಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಧಾರವಾಡ ಅಧೀನದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ 10 ಚಿನ್ನ, 06 ಬೆಳ್ಳಿ ಹಾಗೂ 04 ಕಂಚು ಸೇರಿ ಒಟ್ಟು 20 ಪದಕ ಪಡೆದಿದ್ದಾರೆ.
ಪ್ರಬಾವತಿ ಲಂಗೋಟಿ 36 ಕೆಜಿ ವಿಭಾಗದಲ್ಲಿ ಕಾವ್ಯಶ್ರೀ ಪ್ರಶಸ್ತಿಯನ್ನು ಮತ್ತು 46 ಕೆಜಿಯಲ್ಲಿ ಪುಷ್ಪ ನಾಯಕ ಕರ್ನಾಟಕ ಮಹಿಳಾ ಬಾಲ ಕಿಶೋರಿ ಪ್ರಸ್ತಿಯನ್ನು ಪಡೆದಿದ್ದಾಳೆ. ಅಭಿ ಕುರುಬರ ಹಾಗೂ ಬಜರಂಗಿ ದೊಡಮನಿ ಯಂಕಪ್ಪ ಕುಡಗಿ, ಸುದೀಪ ನೇಸರಗಿ, ಪುಷ್ಪ ನಾಯಕ, ದಾದಾಫೀರ ಸಲಿಯಾದನವರ, ಚೇತನ ತುಕ್ಕೋಜಿ, ಜಾನವಿ ಕೆ, ಚಿನ್ನದ ಪದಕವನ್ನು ಮತ್ತು ಶಿವಾಜಿ ಗಾಯಕವಾಡ, ಗಂಗೋತ್ರಿ ಚವ್ಹಾನ, ಮಾದೇಶ ಭಟ್ಟೆಸು, ಶ್ರೀಧರ ಗೋರ್ಪಡೆ, ಚೇತನ ತುಕ್ಕೋಜಿ, ಆಕಾಶ ಪಾಟೀಲ ಬೆಳ್ಳಿಯ ಪದಕವನ್ನು ಮತ್ತು ದರ್ಶನ ತಳವಾರ, ಆದಮ್ಮಸಾಬ ಗಳಗಲಿ, ಅನುಶ್ರೀ ಚೌಗಲೆ, ಬಾಹುಸಾಬ ಮಾನೆ ಇವರು ಕಂಚಿನ ಪದಗಳನ್ನು ಪಡೆದು ಧಾರವಾಡ ಜಿಲ್ಲೆಗೆ ಹಾಗೂ ಕ್ರೀಡಾ ಇಲಾಖೆಗೆ ಕೀರ್ತಿಯನ್ನು ತಂದಿದ್ದಾರೆ. ವಿಜೇತ ಕುಸ್ತಿಪಟು ವಿದ್ಯಾರ್ಥಿಗಳಿಗೆ ತರಬೇತುದಾರ ಶಿವಪ್ಪಾ ಪಾಟೀಲ ಅವರು ಕುಸ್ತಿ ತರಬೇತಿ ನೀಡಿದ್ದರು.