ಮೈಸೂರು: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ 317 G ಮೈಸೂರಿನ ತಿಲಕ್ ನಗರದಲ್ಲಿರುವ ಲಯನ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಲಯನ್ಸ್ ಭವನದಲ್ಲಿ ಶಿಕ್ಷಕರಾದ ಯು ಜಿ ಮೋಹನ್ ಕುಮಾರ್ ಆರಾಧ್ಯ ಅವರಿಗೆ ಉತ್ತಮ ಜನ ಮೆಚ್ಚಿದ ಶಿಕ್ಷಕ, ಸಹಾಯಕ ಕಾರ್ಯಪಾಲಕ ಅಭಿಯಂತರದ ಮಹಮ್ಮದ್ ಮುಸ್ತಫ ರವರಿಗೆ ಜನ ಮೆಚ್ಚಿದ ಅಭಿಯಂತರು ಎಂದು ಬಿರುದು ನೀಡಿ ಗೌರವಿಸಲಾಯಿತು.
ಮೈಸೂರಿನ ವಾಣಿವಿಲಾಸ ವಾಟರ್ ವರ್ಕ್ಸ್ ನ ಸಹಾಯಕ ಅಭಿಯಂತರಾದ ಮಹಮದ್ ಮುಸ್ತಫ ಹಾಗೂ ಹಾಗೂ ಏಷ್ಯಾ ಖಂಡದ ವ್ಯಾಪ್ತಿ ಬರುವ ಎಲ್ಲಾ ದೇಶಗಳಗೊಂಡಂತೆ ಲೇಖನಿಂದ ಗರಿಷ್ಠ 700 ವಿಜ್ಞಾನಿಗಳ ಚಿತ್ರ ರಚನೆ ಮಾಡಿ,2023 ರಲ್ಲಿ ಏಷ್ಯಾ ಬುಕ್ಕ ರೆಕಾರ್ಡ್ ದಾಖಲೆ ನಿರ್ಮಿಸಿದ್ದಾರೆ.
ಮೈಸೂರ್ ತಾಲೂಕು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯೋಜಕರಾದ, ಶಿಕ್ಷಕರಾದ ಯು ಜಿ ಮೋಹನ್ ಕುಮಾರ್ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿರುದು ಪ್ರದಾನ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಬಿ ಭಾರತಿ , ಕಾರ್ಯದರ್ಶಿ ಲಯನ್ ಶಿವಕುಮಾರ್, ಖಜಾಂಚಿ ಲಯನ್ ಲೋಕೇಶ್ ಜೆ, ಜಿಲ್ಲಾ ಮಾಜಿ ರಾಜ್ಯಪಾಲರಾದ ಡಾಕ್ಟರ್ ಪ್ರಭಾ ಮಂಡಲ್, ವಲಯ ಅಧ್ಯಕ್ಷರಾದ ಗಿರೀಶ್, ಸದಸ್ಯರಾದ ಲಯನ್ ಬಿ ಶಿವಣ್ಣ, ಪಿ ಎಸ್ ಚಂದ್ರಶೇಖರ್, ಕೃಷ್ಣಮೂರ್ತಿ, ರಾಮಣ್ಣ, ಉಮಾಪತಿ , ಶಿವಕುಮಾರ್, ಸತ್ಯನಾರಾಯಣ್ ರಾವ್, ಮುಕೇಶ್, ಶಿವರಾಜ್, ಸುರೇಶ್, ರಾಮಚಂದ್ರ ರಾವ್, ಗೀತಾ ಕೃಷ್ಣಮೂರ್ತಿ,ಸಂಧ್ಯಾ, ಮುಕ್ತ, ಪ್ರಸನ್ನ, ಆನಂದ್ ಕೃಷ್ಣ, ಬಳ್ಳಾರಿ ಗೌಡ, ಪುನೀತ್ ಇನ್ನು ಮುಂತಾದವರು ಉಪಸ್ಥಿತರಿದ್ದರು.