ಬಳ್ಳಾರಿ : ಜಗತ್ತಿನಲ್ಲೇ ಅತೀ ವೇಗವಾಗಿ ನಡೆಯುತ್ತಿರುವ ಉದ್ಯಮವೆಂದರೆ ಅದು ಫೋಟೋಗ್ರಫಿ. ಈ ಉದ್ಯಮವನ್ನೆ ವೃತ್ತಿಯಾಗಿಸಿಕೊಂಡು ಲಕ್ಷಾಂತರ ಕುಟುಂಬಗಳು ಜೀವನಸಾಗಿಸುತ್ತಿವೆ.
ಬೆಂಗಳೂರಿನ ಕರ್ನಾಟಕ ಫೋಟೋಗ್ರಫಿ ಅಶೋಷಿಯೇಷನ್ ವತಿಯಿಂದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ನವರಂಗ ಸ್ಟುಡಿಯೋ ಮಾಲೀಕರು ಎಸ್.ಟಿ.ಎಮ್. ಜಗದೀಶ್ ಇವರಿಗೆ ಛಾಯಾ ಗುರುವಂದನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪ್ರದಾನ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ. ಕರ್ನಾಟಕ ಛಾಯಾಗ್ರಾಹಕರ ಸಂಘದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ್ಯರಾದ, ಪರಮೇಶ್ವರ್ ನೇತೃತ್ವದಲ್ಲಿ ಕರ್ನಾಟಕ ಚಿತ್ರರಂಗದ ಹಿರಿಯ ನಿರ್ದೇಶಕರಾದ, ಓಂ ಸಾಯಿಪ್ರಕಾಶ್, ಕಲಾವಿಧರಾದ ಆಧಿ ಲೋಕೇಶ್ ಮತ್ತು ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಸೇರಿದಂತೆ ಹಲವು ಗಣ್ಯರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕುರುಗೋಡಿನ, ಎಸ್.ಟಿ.ಎಮ್. ಜಗದೀಶ್, ಶ್ರೀನಿವಾಸಶೆಟ್ಟಿ ಕುರುಗೋಡು, ಗಂಗಾಧರ ಸೇರಿದಂತೆ ಜಿಲ್ಲೆಯ ಕಂಪ್ಲಿಯ, ಕುಮಾರ್ ಸ್ವಾಮಿ, ಜಗದೀಶ್, ಸಿರುಗುಪ್ಪ, ಹುಲುಗಪ್ಪ, ವೆಂಕಟೇಶ್ ಬಳ್ಳಾರಿ, ಪಾಲ್.ಬಿ, ಪ್ರಕಾಶ್ ಪೂಜಾರ್, ಸಂಡೂರಿನ ಗಿರೀಶ್, ಸತ್ಯನಾರಾಯಣ ಇನ್ನಿತರರಿಗೆ, ಛಾಯಾ ಸಾಧಕ ಮತ್ತು ಛಾಯಾ ಗುರುವಂದನಾ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ಬಳ್ಳಾರಿ ಜಿಲ್ಲಾಧ್ಯಕ್ಷ ಚಂದ್ರಮೋಹನ್ ಗೌಡ, ಉಪಾಧ್ಯಕ್ಷ ನಾಗಳ್ಳಿ ವೀರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ, ಮುರಳಿ, ಕೆ.ವೀರೇಶ್. ಬಳ್ಳಾರಿ ತಾಲೂಕು ಅಧ್ಯಕ್ಷ, ಶ್ರೀಧರ್ ಯಾದವ್, ಕುರುಗೋಡು ತಾಲೂಕು ಅಧ್ಯಕ್ಷ ಶ್ರೀಧರ ಶೆಟ್ಟಿ.ಸಿರುಗುಪ್ಪ ನಾಗರಾಜ್, ಕಂಪ್ಲಿ ಸಿದ್ದರಾಮಗೌಡ, ಸಂಡೂರು ಜೀಲಾನ್ ಸೇರಿದಂತೆ ವಿವಿಧ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.