ಹುಣಸೂರು: ಮಹಿಳೆಯರಲ್ಲಿ ಇತ್ತೀಚೆಗೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕಂಡು ಬರುತ್ತಿದ್ದು, ಅದು ಹರಡುವ ಮುನ್ನ ಮುಂಜಾಗ್ರತೆಯ ಕ್ರಮವಹಿಸಬೇಕಾಗುತ್ತದೆ ಎಂದು ಅಪೋಲೊ ಆಸ್ಪತ್ರೆಯ ಪ್ರಖ್ಯಾತ ಪ್ರಸೂತಿ ಮತ್ತು ಸ್ರೀರೋಗ ತಜ್ಞೆ ಡಾ. ಕವಿತಾ ಬಿ. ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಹುಣಸೂರು ರೋಟರಿ ಕ್ಲಬ್ ಮತ್ತು ಹುಣಸೂರು ಅಪೋಲೊ ಆಸ್ಪತ್ರೆ ಸಯೋಗದಲ್ಲಿ ನಡೆದ ಸ್ತನ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳುವುದರ ಜತೆಗೆ ಪೌಷ್ಟಿಕಾಂಶವಿರುವ ಆಹಾರ ಸೇವಿಸುವ ಮೂಲಕ ರಕ್ತ ಹೀನತೆ ಕಂಡು ಬರದಂತೆ ನಿಗವಹಿಸಬೇಕಿದೆ ಎಂದರು.
ಹೆಣ್ಣು ಮಕ್ಕಳು ಪ್ರಾಯಕ್ಕೆ ಬರುತ್ತಿದ್ದಂತೆ. ಮುಟ್ಟಿನ ಸಂದರ್ಭ ಅತಿಯಾದ ರಕ್ತಸ್ರಾವ, ಹೊಟ್ಟೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೆ, ಸ್ತನದಲ್ಲಿ ಗುಳ್ಳೆಗಳು ಕಾಣಿಸಿದಾಗ, ಮುಜುಗರ ಪಡದೆ, ಕೂಡಲೇ ವೈದ್ಯರನ್ನು ಕಂಡು ಪರೀಕ್ಷೆಗೆ ಒಳಗಾಗಬೇಕು ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಆರೋಗ್ಯದ ವಿಚಾರದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು. ಮಹಿಳೆಯರಲ್ಲಿ ಈ ಮಹಾಮಾರಿ ಸ್ತನ ಕ್ಯಾನ್ಸರ್ ಎಂಬ ಕೂಪ ಎಲ್ಲರನ್ನೂ ಕಾಡುತ್ತಿದ್ದು, ಅದನ್ನು ಬುಡಸಮೇತ ಒಡದೋಡಿಸಬೇಕಾದರೆ. ಅಪೋಲೊ ಆಸಪತ್ರೆಯ ವೈದ್ಯರು ಹಾಗೂ ರೋಟರಿವತಿಯಿಂದ ಸಿಗುವ ಸೌಲಭ್ಯವನ್ನು ಪಡೆದುಕೊಂಡು ಕ್ಯಾನ್ಸರ್ ನಿಂದ ದೂರವಿರಬೇಕೆಂದರು.
ಶಿಬಿರದಲ್ಲಿ ಸುಮಾರು 50 ಮಹಿಳೆಯರು ಹಾಗೂ ಹದಿಹರೆಯದ ರೋಟರಿ ಶಾಲೆಯ ವಿದ್ಯಾರ್ಥಿಳು ಭಾಗವಹಿಸಿ. ಪಿಸಿಓಡಿ ಮತ್ತು ಥೈರಾಯ್ಡ್ ಬಗ್ಗೆ ಸಮಗ್ರ ಸಮಾಲೋಚನೆ ನಡೆಸಿದ ನಂತರ. ಎಲ್ಲರಿಗೂ ಡಾ.ಕವಿತಾ ತಪಾಸಣೆ ನಡೆಸಿ ಚಿಕಿತ್ಸೆಗೆ ಒಳಪಡಿಸಿದರು.
ಕಾರ್ಯಕ್ರಮದಲ್ಲಿ ರೊ. ಆನಂದ್ ಆರ್, ರೊ.ರಾಜಶೇಖರ್, ರೊ.ಲೂಯಿಸ್ ಪೆರೇರಾ, ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ, ರೋಟರಿ ವಿದ್ಯಾಸಂಸ್ಥೆ ಮುಖ್ಯ. ಶಿಕ್ಷಕಿ ದೀಪಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಬಿ.ಎನ್. ಶ್ರೀನಿವಾಸ್, ಅಪೋಲೊ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ ಮೂರ್ತಿ .ಬಿ, ಸುನಿತಾ ಜಿ. ಇದ್ದರು.