ಟಿ.ನರಸೀಪುರ: ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದ ಸೇಂಟ್ ನಾರ್ಬರ್ಟ್ ಪಿಯು ಕಾಲೇಜಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪ್ರಾಧ್ಯಾಪಕರಿಗೆ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ಸಿಬ್ಬಂದಿಗಳಾದ ಮಹದೇವಸ್ವಾಮಿ ಕೆ ಎನ್, ಮಹೇಶ್ ಸಿ ಎನ್ ಟಿ ನರಸೀಪುರ ಇನ್ಸ್ಪೆಕ್ಟರ್ ಮೇದಪ್ಪ ಹಾಗೂ ಸಿಬ್ಬಂದಿಗಳು ಸೈಬರ್ ಅಪರಾಧಗಳಾದ ಫಿಶಿಂಗ್,ಲೋನ್ ಫ್ರಾಡ್,ಇನ್ವೆಸ್ಟ್ ಮೆಂಟ್ ಫ್ರಾಡ್,OLX ಫ್ರಾಡ್, OTP ಫ್ರಾಡ್, Prize ಫ್ರಾಡ್, Gift ಫ್ರಾಡ್, Matrimonial ಫ್ರಾಡ್, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್,ಫೇಸ್ ಬುಕ್, ಇನ್ಸ್ಟಾಗ್ರಾಮ್,ಫೆಡ್ ಎಕ್ಸ್ ಗಳ ಮೂಲಕ ನಡೆಯುತ್ತಿರುವ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಿದರು.