Friday, April 18, 2025
Google search engine

Homeಸ್ಥಳೀಯಮೈಸೂರು: ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಸ್ಪರ್ಧೆ, ಉಪನ್ಯಾಸದ ಮೂಲಕ ಅರಿವು

ಮೈಸೂರು: ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಸ್ಪರ್ಧೆ, ಉಪನ್ಯಾಸದ ಮೂಲಕ ಅರಿವು

ಮೈಸೂರು: ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ ಮೈಸೂರು ವತಿಯಿಂದ ಶ್ರೀ ವಾಣಿವಿಲಾಸ ಅರಸು ಬಾಲಿಕ ಪ್ರೌಢಶಾಲೆಯಲ್ಲಿ 10 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನನಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಈ ಬಾರಿ ಯೋಗ ಕಾರ್ಯಕ್ರಮ ನಡೆಸಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ ಎಂದು ಕೇಂದ್ರ ಸಂವಹನ ಇಲಾಖೆ ಬೆಂಗಳೂರು ನಿರ್ದೇಶಕರಾದ ಪಲ್ಲವಿ ಚಿಣ್ಯ ಐ.ಐ.ಎಸ್ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಬೇಕೆಂದು ಅವರು ಕರೆನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಒಂದು ತಾಸು ಸಾಮಾನ್ಯ ಯೋಗಾಸನಾ ಹಾಗೂ ಪ್ರಾಣಾಯಾಮವನ್ನು ನುರಿತ ಯೋಗತಜ್ಞರ ಮಾರ್ಗದರ್ಶನದೊಂದಿಗೆ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಯೋಗತಜ್ಞ  ನಾಗೇಂದ್ರ ಪ್ರಭು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಯೋಗದ ವಿವಿಧ ಆಸನಗಳ ಉಪಯುಕ್ತತೆ ಕುರಿತು ಮಾಹಿತಿ ನೀಡಿದರು.

ಯೋಗದಲ್ಲಿ ವಿಶ್ವಾದಾಖಲೆ ನಿರ್ಮಿಸಿದ, ಹಲವು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಸೌರಭ ಜಿ ಅವರನ್ನು ಈ  ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ನುರಿತ ಯೋಗಪಟು ಅಂಕಿತ ಯೋಗಾಸನ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಯೋಗ ದಿನದ ಅಂಗವಾಗಿ ರಂಗೋಲಿ, ಚಿತ್ರಕಲೆ ಹಾಗೂ ಯೋಗ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕೇಂದ್ರ ಸಂವಹನ ಇಲಾಖೆ ಭಿತ್ತಿಪತ್ರಗಳ ಮೂಲಕ ವಿವಿಧ ಯೋಗಾಸನಗಳ ಜಾಗೃತಿ ಮೂಡಿಸಿತು.

ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಶ್ರುತಿ ಎಸ್ ಟಿ ಪ್ರಾಸ್ತಾವಿಕ ನುಡಿ ನುಡಿದರು. ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್ ಪಿ ಸ್ವಾಗತ ಭಾಷಣ ಮಾಡಿದರು. ಶಾಲೆಯ ಮುಖ್ಯಪಾಧ್ಯಾಯರಾದ ಎನ್ ಸುಬ್ರಮಣ್ಯ ಅಧ್ಯಕ್ಷೀಯ ನುಡಿ ಮಾತನಾಡಿದರು. ಶಿಕ್ಷಕರಾದ ತೇಜಾವತಿ ಎಸ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಡಿ ಆರ್ ವಂದಿಸಿದರು.

RELATED ARTICLES
- Advertisment -
Google search engine

Most Popular