Monday, July 7, 2025
Google search engine

Homeಸ್ಥಳೀಯನಂಜರಾಜ ಬಹದ್ದೂರ್ ಛತ್ರದ ಪಾರಂಪರಿಕ ಮರದ ಬೇರಿಗೆ ಕೊಡಲಿ: ಪರಿಸರ ಪ್ರೇಮಿಗಳಿಂದ ಪ್ರತಿಭಟನೆ

ನಂಜರಾಜ ಬಹದ್ದೂರ್ ಛತ್ರದ ಪಾರಂಪರಿಕ ಮರದ ಬೇರಿಗೆ ಕೊಡಲಿ: ಪರಿಸರ ಪ್ರೇಮಿಗಳಿಂದ ಪ್ರತಿಭಟನೆ

ಮೈಸೂರು: ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿರುವ ನೂರಕ್ಕೂ ಹೆಚ್ಚು ವರ್ಷದ ಹಳೆಯ ಮರದ ಸುತ್ತ ಇದ್ದಂತಹ ಕಟ್ಟೆಯನ್ನು ದುರಸ್ತಿಯ ನೆಪದಲ್ಲಿ ಮರವನ್ನು ಕಡಿಯಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು ಅದರ ವಿರುದ್ಧ ಪರಿಸರ ಪ್ರೇಮಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಕಡಿದ ಬೇರನ್ನು ಹಿಡಿದು ಅಧಿಕಾರಗಳ ವಿರುದ್ಧ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಅಭಿವೃದ್ಧಿ ನೆಪದಲ್ಲಿ ಇತಿಹಾಸ ಇರುವ ಬೃಹದಾಕಾರ ಮರದ ಬುಡಕ್ಕೆ ಕೊಡಲಿ ಪೆಟ್ಟು ಮಾಡಿರುವುದು ಅತ್ಯಂತ ಬೇಸರವಾಗುತ್ತದೆ, ದಿನದಿನ ಅಭಿವೃದ್ಧಿಯ ನೆಪದಲ್ಲಿ ಮರಗಳ ಮರಣ ಹೋಮ ಮಾಡುತ್ತಾ ಬಂದಿದ್ದಾರೆ. ಕೇಳಲು ಹೋದರೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರವನ್ನು ನೀಡಿದ್ದಾರೆ, ಪಾರಂಪರಿಕ ಕಟ್ಟಡವಾಗಿದ್ದು
ಇದನ್ನು ಪಾರಂಪರಿಕ ವೃಕ್ಷ ಎಂದು ಘೋಷಿಸಬೇಕಿದೆ, ಮೊದಲು ನಂಜು ರಾಜ ಬಹುದೂರ್ ಛತ್ರ ಕಾಮಗಾರಿಗಳನ್ನು ಮಾಡಬೇಕು, ಅನವಶ್ಯಕ ಇರುವ ಕಾಮಗಾರಿಗಳನ್ನು ಕೈಬಿಟ್ಟು ಮರಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು, ಇದನ್ನು ಈ ಕೂಡಲೇ ಎಂದಿನಂತೆ ಸರಿಪಡಿಸಬೇಕು ಇಲ್ಲವಾದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಜೀವದಾರರ ರಕ್ತ ನಿಧಿ ಕೇಂದ್ರದ ಗಿರೀಶ್, ಯುವ ಮುಖಂಡರಾದ ಹರೀಶ್ ಗೌಡ, ಮಂಜುನಾಥ್ ಗೌಡ , ಸಂದೇಶ್, ರವಿಚಂದ್ರ, ಎಸ್ ಎನ್ ರಾಜೇಶ್, ನೀತು, ಸಂತೋಷ್, ಹಾಗೂ ಇನ್ನಿತರರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular