Friday, June 27, 2025
Google search engine

HomeUncategorizedರಾಷ್ಟ್ರೀಯಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾಗಿಯಾದ ಆಕ್ಸಿಯಮ್-4 ಮಿಷನ್ ಯಶಸ್ವಿ: ಐಎಸ್‌ಎಸ್‌ನಲ್ಲಿ ನೌಕೆ ಡಾಕ್

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾಗಿಯಾದ ಆಕ್ಸಿಯಮ್-4 ಮಿಷನ್ ಯಶಸ್ವಿ: ಐಎಸ್‌ಎಸ್‌ನಲ್ಲಿ ನೌಕೆ ಡಾಕ್

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್‌ನ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಇಂದು (ಜೂನ್ 26) ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಯಶಸ್ವಿಯಾಗಿ ಡಾಕ್ ಆಗಿದೆ. ಭೂಮಿಯಿಂದ ಹೊರಟ 28 ಗಂಟೆಗಳ ಬಳಿಕ ಈ ನೌಕೆ ನಿಲ್ದಾಣವನ್ನು ತಲುಪಿದೆ.

ಬುಧವಾರ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ 9 ರಾಕೆಟ್ ಮೂಲಕ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹಾರಿದ್ರು. ಈ ತಂಡ 14 ದಿನಗಳ ಕಾಲ ISS ನಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲಿದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಈ ತಂಡದಲ್ಲಿ ಭಾರತೀಯ ಶುಭಾಂಶು ಶುಕ್ಲಾ ಜೊತೆಗೆ ಪೋಲೆಂಡ್‌ನ ಸ್ಲವೋಜ್ ಉಝ್ನಾಸ್ಕಿ, ಅಮೆರಿಕದ ಪೆಗ್ಗಿ ವಿಟ್ಸನ್ ಮತ್ತು ಹಂಗೇರಿಯಾದ ಟಿಬರ್ ಭಾಗಿಯಾಗಿದ್ದಾರೆ. ಶುಭಾಂಶು ಶುಕ್ಲಾ ಆಕ್ಸಿಯಮ್-4 ಮಿಷನ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದು, ಬಾಹ್ಯಾಕಾಶ ತಲುಪಿದ ಎರಡನೇ ಭಾರತೀಯರಾಗಿದ್ದಾರೆ. ಜೊತೆಗೆ ಖಾಸಗಿ ಬಾಹ್ಯಾಕಾಶ ಯೋಜನೆಯಡಿ ಐಎಸ್‌ಎಸ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

RELATED ARTICLES
- Advertisment -
Google search engine

Most Popular