Friday, April 4, 2025
Google search engine

HomeUncategorizedರಾಷ್ಟ್ರೀಯಅಯೋಧ್ಯೆ ರಾಮ ಮಂದಿರ: 11 ದಿನಗಳಲ್ಲಿ 25 ಲಕ್ಷ ಭಕ್ತರು ಭೇಟಿ, ₹11 ಕೋಟಿ ಕಾಣಿಕೆ...

ಅಯೋಧ್ಯೆ ರಾಮ ಮಂದಿರ: 11 ದಿನಗಳಲ್ಲಿ 25 ಲಕ್ಷ ಭಕ್ತರು ಭೇಟಿ, ₹11 ಕೋಟಿ ಕಾಣಿಕೆ ಸಂಗ್ರಹ

ಅಯೋಧ್ಯೆ: ಜನವರಿ 22ರಂದು ನಡೆದ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ₹11 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಕಳೆದ 11 ದಿನಗಳಲ್ಲಿ ಸುಮಾರು ₹8 ಕೋಟಿ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಚೆಕ್ ಮತ್ತು ಆನ್‌ಲೈನ್ ಮೂಲಕ ಸುಮಾರು ₹3.50 ಕೋಟಿ ಸಂಗ್ರಹವಾಗಿದೆ. ದೇಗುಲದ ಗರ್ಭಗುಡಿಯ ಮುಂಭಾಗದ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಗಾತ್ರದ ಕಾಣಿಕೆ ಡಬ್ಬಿಗಳನ್ನು ಇಡಲಾಗಿದ್ದು, ಅದರಲ್ಲಿ ಭಕ್ತರು ಕಾಣಿಕೆ ಹಾಕಿದ್ದಾರೆ. ಅಲ್ಲದೇ 10 ಗಣಕೀಕೃತ ಕೌಂಟರ್‌ಗಳಲ್ಲಿಯೂ ಜನರು ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಣಿಗೆ ಕೌಂಟರ್‌ನಲ್ಲಿ ದೇವಸ್ಥಾನದ ಟ್ರಸ್ಟ್‌ ನೌಕರರನ್ನು ನೇಮಿಸಲಾಗಿದೆ. ಸಂಜೆ ಕೌಂಟರ್‌ ಮುಚ್ಚಿದ ನಂತರ ಟ್ರಸ್ಟ್‌ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕದ ವರದಿಯನ್ನು ಇವರು ಸಲ್ಲಿಸುತ್ತಾರೆ.

11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಮೂವರನ್ನು ಒಳಗೊಂಡ 14 ಜನರ ತಂಡವು ನಾಲ್ಕು ಕಾಣಿಕೆ ಹುಂಡಿಗಳಲ್ಲಿನ ಹಣವನ್ನು ಎಣಿಸುತ್ತಾರೆ. ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular