Monday, April 21, 2025
Google search engine

Homeಸ್ಥಳೀಯಆಯುರ್ವೇದವು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ: ಶಾಸಕ ಜಿ.ಟಿ.ದೇವೇಗೌಡ

ಆಯುರ್ವೇದವು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಆಯುರ್ವೇದವು ಭಾರತದ ವೈದ್ಯ ಪದ್ದತಿಯಾಗಿದ್ದು, ಇಂದು ವಿಶ್ವಮನ್ನಣೆಯನ್ನು ಪಡೆದುಕೊಂಡಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಅವರು ಇಂದು ಆಯುಷ್ ಇಲಾಖೆಯು ಚಾಮುಂಡೇಶ್ವರಿ ಕ್ಷೇತ್ರದ ಲಿಂಗಾಂಬುದಿಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ “ಆಯುಷ್ ಸೇವಾ ಗ್ರಾಮ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರ್ಯುದೇವದಕ್ಕೆ ತನ್ನದೆ ಆದ ವಿಶೇಷ ಶಕ್ತಿ ಇದೆ. ಪುರಾತನ ಕಾಲದಲ್ಲಿ ಆರ್ಯುವೇದ ಬಳಸಿಕೊಂಡು ಚಿಕಿತ್ಸೆ ಪಡೆದು ಸಾಧ್ಯ ಇಲ್ಲ ಎಂಬುದನ್ನು ಸಾಧಿಸಿರುವ ಕೀರ್ತಿ ಆಯುರ್ವೇದಕ್ಕೆ ಇದೆ ಎಂದರು.

ಆರ್ಯುವೇದವು  ನಮ್ಮ ದೇಹದ ಪಂಚೇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಆರ್ಯುವೇದವನ್ನು ನಾವು ಚಿಕಿತ್ಸೆಗಿಂತ ಮುಖ್ಯವಾಗಿ ಬದುಕಿನ ಭಾಗ ಎಂಬುದಾಗಿ ಪರಿಗಣಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಈ ಪದ್ದತಿಯನ್ನು  ತಲುಪಿಸುವ ಕಾರ್ಯ ಮಾಡಬೇಕು.  ಆರ್ಯುವೇದ ಪದ್ದತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ನಿಯಮಗಳನ್ನು ಬದುಕಿನಲ್ಲಿ ಪಾಲಿಸಬೇಕು. ಇದರಿಂದ ಆತ್ಮಸ್ಥೆöÊರ್ಯ ವೃದ್ಧಿಯಾಗಿ ಗುಣಾತ್ಮಕ ಯೋಚನೆ ಮೂಡುತ್ತದೆ ಎಂದರು. 

ಆಯುರ್ವೇದವು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ , ಆಯುರ್ವೇದದ ಮೂಲಕ ಅನೇಕ ರೋಗಗಳನ್ನು ಗುಣಪಡಿಸುವ ಪದ್ಧತಿ ಯುಗ ಯುಗದಿಂದಲೂ ಇದೆ. ಈ ಪದ್ಧತಿ ಮನಸ್ಸು ಮತ್ತು ದೇಹ ಎರಡನ್ನೂ ಗುಣಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಆದರೆ ಆಯುರ್ವೇದ ಪದ್ಧತಿ ತಲೆಮಾರುಗಳಿಂದ ಇದ್ದರೂ, ಕೊರೊನಾ ವಕ್ಕರಿಸಿದ ಮೇಲೆ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಅರಿವು ಮತ್ತು ಜ್ಞಾನದ ಕೊರತೆಯಿಂದ ಆಯುರ್ವೇದದ ಬಗ್ಗೆ ಕೆಲವು ತಪ್ಪುಗ್ರಹಿಕೆಗಳಿವೆ. ಆದ್ದರಿಂದ ಆಯುರ್ವೇದ ಬಗ್ಗೆ ನಾವು ತಿಳಿದುಕೊಳ್ಳಬೇಕು ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಇಂದಿನ ಹೈಪರ್ ಟೆನ್ಷನ್ ಪ್ರಪಂಚದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಈ ನಿಟ್ಟಿನಲ್ಲಿ ಪ್ರತಿ ನಿತ್ಯ ಯೋಗ, ಧ್ಯಾನಗಳನ್ನು ಮಾಡಬೇಕು. 

ಹಣ -ಆಸ್ತಿ ಸಂಪಾದನೆ, ಉಳಿತಾಯ ಮುಂತಾದ ವಿಚಾರಗಳತ್ತ ಗಮನ ಹರಿಸುವಂತೆಯೇ, ಆರೋಗ್ಯದತ್ತಲೂ ಗಮನ ಹರಿಸುವುದರಿಂದ, ಆರ್ಥಿಕ ಸಮಸ್ಯೆಗಳೂ ಪರಿಹಾರ ಕಾಣುತ್ತವೆ. ಭಾರತದ ಪಾರಂಪರಿಕ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವುದರಿಂದ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ, ದೇಹ- ಮನಸ್ಸೂ ಸುಸ್ಥಿತಿಯಲ್ಲಿರುತ್ತದೆ. ಪ್ರಾಕೃತಿಕ ಆರೋಗ್ಯ ವನ್ನು ದಯಪಾಲಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ,  ಗ್ರಾಮದ ಮುಖಂಡರಾದ ದೇವಯ್ಯ, ಯೋಗೇಶ್, ಬಂಗಾರಪ್ಪ ರಾಮಣ್ಣ, ಲಕ್ಷ್ಮಯ್ಯ, ದಾಸಯ್ಯ, ಮಲ್ಲಯ್ಯ, ಯಶೋಧ, ಪುಟ್ಟಯ್ಯ, ರಾಮಸ್ವಾಮಿ, ಕೃಷ್ಣಪ್ಪ, ಸೇರಿದಂತೆ ಹಲವಾರು ಮುಖಂಡರು ಭಾಗವಹಸಿದ್ದರು.

RELATED ARTICLES
- Advertisment -
Google search engine

Most Popular